ಜೋಗ್‌ ಫಾಲ್ಸ್‌ ತೋರಿಸಿ ಸಾಗರದ ಲಾಡ್ಜ್ನಲ್ಲಿ ಅತ್ಯಾಚಾರ ಮಾಡಿದ ಕುಂದಾಪುರದ ಯುವಕ

1:35 PM, Saturday, January 5th, 2019
Share
1 Star2 Stars3 Stars4 Stars5 Stars
(1 rating, 1 votes)
Loading...

Vigneshwaraಕುಂದಾಪುರ: ಯುವತಿಯೊಬ್ಬಳನ್ನು ದೈಹಿಕವಾಗಿ ಬಳಸಿ ಬಳಿಕ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂಪಾರು ಗ್ರಾಮದ ಮೂಡುಬಗೆ ನಿವಾಸಿ ವಿಜ್ಞೇಶ್ವರ್ (32) ಎಂಬವನನ್ನು ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಆತ ದೋಷಿಯೆಂದು ಘೋಷಿಸಿದ್ದು, ಜ.8ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಸುಮಾರು 22 ವರ್ಷದ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯನ್ನು ಪುಸಲಾಯಿಸಿದ ವಿಜ್ಞೇಶ್ವರ್ 2011ರ ಜೂ. 2ರಂದು ಆಕೆಯ ಮನೆಗೆ ಬಂದು, “ನಿನ್ನನ್ನು ನನ್ನ ಪೋಷಕರು ನೋಡಬೇಕಿದ್ದು, ಅದಕ್ಕಾಗಿ ಅಂಪಾರಿನ ನನ್ನ ಮನೆಗೆ ಬಾ’ ಎಂದು ಕರೆದೊಯ್ದು, ಮನೆ ತೋರಿಸುವ ನೆಪದಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಬಳಿಕ 2011ರ ನ.15ರಂದು ಜೋಗ್‌ ಫಾಲ್ಸ್‌ ನೋಡುವ ಸಲುವಾಗಿ ಕರೆದೊಯ್ದು, ಸಾಗರದ ಲಾಡ್ಜ್ನಲ್ಲಿ ಅತ್ಯಾಚಾರವೆಸಗಿದ್ದ. ಮೊದಲು ಮದುವೆಯಾಗುವ ಭರವಸೆ ನೀಡಿದ್ದ ಆತ ಬಳಿಕ ಒಪ್ಪದಿದ್ದಾಗ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಕುಂದಾಪುರದ ಆಗಿನ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್‌ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬಿ. ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English