ಆರ್​ಎಸ್​ಎಸ್ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಡಾನ್ ಬಂಧನ 

1:52 PM, Monday, January 14th, 2019
Share
1 Star2 Stars3 Stars4 Stars5 Stars
(No Ratings Yet)
Loading...

Kalladka-Prabhakaraಮಂಗಳೂರು : ಕೆಲವು ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಶಂಕೆಯಲ್ಲಿ ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಪಂಚಾಯಿತಿ ವ್ಯಾಪ್ತಿಯ ಚೆಂಬರಿಕ ನಿವಾಸಿ, ಸಿ.ಎಂ ಮುಹತಾಸಿಂ ಅಲಿಯಾಸ್ ತಾಸಿಂ ಯಾನೆ ಡಾನ್ (41) ಎಂಬಾತನನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಉಗ್ರ ಸಂಘಟನೆ ಐಸಿಸ್ನ ನಂಟು ಹೊಂದಿರುವ ಆರೋಪಿ, ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸ್ಕೆಚ್ ಹಾಕುವಲ್ಲಿ ಮುಹತಾಸಿಂ ಪ್ರಮುಖ ಪಾತ್ರ ವಹಿಸಿರುವ ಅನುಮಾನಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಹಸ್ಯ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿ, ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದ ಬಳಿಕ ದೆಹಲಿಗೆ ಕರೆದೊಯ್ಯಲಾಗಿದೆ.

ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ನಡೆಯುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ ಬೆನ್ನಲ್ಲೇ ಕಾಸರಗೋಡಿಗೆ ಬಂದ ದೆಹಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿರುವುದು ಗಮನಾರ್ಹ. ಆದರೆ, ಈ ಬಗ್ಗೆ ವಿವರ ನೀಡಲು ಸ್ಥಳೀಯ ಠಾಣೆ ಪೊಲೀಸರು ಹಾಗೂ ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.

ಕೇರಳದಿಂದ ನಾಪತ್ತೆಯಾದವರಲ್ಲಿ ಬಹುತೇಕ ಮಂದಿ ವಿದೇಶಕ್ಕೆ ತರಳಿ ಐಸಿಸ್ ಸೇರಿದ್ದಾರೆ. ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ನಡೆಯುವ ಸಣ್ಣಪುಟ್ಟ ಗಲಭೆಗಳೂ ಕೋಮು ಹಿಂಸಾಚಾರದ ಸ್ವರೂಪ ಪಡೆದುಕೊಳ್ಳುವಲ್ಲಿ ಮುಹತಾಸಿಂ ಅಂಥವರ ಕೈವಾಡವಿದೆ ಎಂಬ ಬಗ್ಗೆ ಗುಪ್ತಚರ ವರದಿ ಇದೆ. ಉಗ್ರ ಸಂಘಟನೆ ಐಸಿಸ್, ಕೇರಳ ಹಾಗೂ ಕರ್ನಾಟಕದಲ್ಲಿ ತನ್ನ ಬೇರು ವಿಸ್ತರಿಸಿಕೊಳ್ಳುತ್ತಿರುವುದನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ ಈಗಾಗಲೇ ತಿಳಿಸಿದ್ದು, ಮುಹತಾಸಿಂ ಬಂಧನದಿಂದ ಇದು ಖಚಿತವಾಗಿದೆ.

ಹೀಗಿತ್ತು ಕಾರ್ಯಾಚರಣೆ: ದೆಹಲಿ ಪೊಲೀಸರ ಸಹಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ನೇತೃತ್ವದಲ್ಲಿ ಆರೋಪಿ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಚಟ್ಟಂಚಾಲಿನ ತನ್ನ ಪತ್ನಿ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದ ವಿದ್ಯಾನಗರ ಠಾಣೆ ಎಸ್.ಐ. ಅನೂಪ್ ಕುಮಾರ್ ಕಾರ್ಯಾಚರಣೆಗೆ ಮುಂದಾದರು. ಆದರೆ, ಇದರ ಸುಳಿವು ಪಡೆದ ಆರೋಪಿ ಪರಾರಿಯಾಗಲು ಯತ್ನಿಸಿದ. ಈತನನ್ನು ಬೆನ್ನಟ್ಟಿದ ಪೊಲೀಸರು ಕೊನೆಗೂ ಸೆರೆಹಿಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English