ಕ್ರಾಂತಿಕಾರಿ ವಚನಗಳ ಮೂಲಕ ಜನಮಾನಸದಲ್ಲಿ ಅಮರರಾದವರು ಅಂಬಿಗರ ಚೌಡಯ್ಯ

11:48 PM, Monday, January 21st, 2019
Share
1 Star2 Stars3 Stars4 Stars5 Stars
(No Ratings Yet)
Loading...

ambigaಮಂಗಳೂರು : ಅನ್ಯಾಯ, ಜಾತೀಯತೆ, ಅಧಾರ್ಮಿಕ ಆಚರಣೆಗಳು ಹಾಗೂ ಡಾಂಭಿಕತೆಯ ವಿರುದ್ಧ ತಮ್ಮ ಕ್ರಾಂತಿಕಾರಿ ವಚನಗಳ ಮೂಲಕ ಜನಮಾನಸದಲ್ಲಿ ಅಮರರಾದವರು ಅಂಬಿಗರ ಚೌಡಯ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ಇಂದು ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆ ಮಂಗಳೂರಿನಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮೊಗವೀರ ಅಂಬಿಗರ ಚೌಡಯ್ಯ ಸಮಾಜ ಸೇವಾಸಂಘ ಮುಲ್ಕಿ ಇವರ ಆಶ್ರಯದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಧಕರ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕು. ತಮ್ಮ ನೇರ ನಡೆನುಡಿಯ ಮೂಲಕ ಹಾಗೂ ಸತ್ಯದ ಪ್ರತಿಪಾದನೆಯನ್ನು ಧೈರ್ಯವಾಗಿ ವಚನಗಳ ಮೂಲಕ ಹೇಳಿ ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿದವರು ಎಂದರು.

ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಬಿ. ಎಮ್ ಶರಭೇಂದ್ರ ಸ್ವಾಮಿ ಮಾತನಾಡಿ, ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲಾ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವವರು ಎಂದು ಸಂಪನ್ಮೂಲ ವ್ಯಕ್ತಿಯಾಗಿ ಸಂದೇಶ ನೀಡಿದರು.

ಸಮಾಜದ ಪರಿವರ್ತನೆ ಬಯಸಿದ ಹಾಗೂ ಮೌಢ್ಯಾಚರಣೆಯ

ವಿರುದ್ದ 12ನೇ ಶತಮಾನದಲ್ಲಿ ಹೋರಾಡಿದವರು. ಸಮ ಸಮಾಜದ ಸೃಷ್ಟಿಗಾಗಿ ಯತ್ನಿಸಿದ ಇವರು, ಬಸವಣ್ಣನವರ ಅನುಭವ ಮಂಟಪದಲ್ಲಿ ಒಬ್ಬ ಸಕ್ರಿಯ ಸದಸ್ಯರಾಗಿದ್ದರು.

ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಟಿ.ಜೆ ಗುರುಪ್ರಸಾದ್ ಮಂಗಳೂರು ತಾಲೂಕು ತಹಸಿಲ್ದಾರ್, ಕೇಶವ ಸಾಲ್ಯಾನ್ ಮೊಗವೀರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷ, ಪ್ರಭು ಅಲ್ಲೂರು ಅಧ್ಯಕ್ಷರು ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸೇವಾ ಸಂಘ, ಪ್ರಾಂಶುಪಾಲರಾದ ಫಿಲೋಮಿನಾ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English