ಮಂಗಳೂರು : ಪ್ರಿಯಾಂಕಾರಲ್ಲಿ ಜನರು ಇಂದಿರಾ ಗಾಂಧಿಯ ವರ್ಚಸ್ಸನ್ನು ಕಾಣುತ್ತಿದ್ದಾರೆ. ಅವರು ಪಕ್ಷದ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿರುವುದು ಪಕ್ಷಕ್ಕೆ ಬಲ ತಂದಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿ ಯಲ್ಲಿಂದು ಹೇಳಿದ್ದಾರೆ.
ದೇಶದ ರಾಜಕೀಯಕ್ಕೂ ಅವರ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ನೆಹರು ಕುಟುಂಬ ದೇಶಕ್ಕೆ ಮಾಡಿರುವ ತ್ಯಾಗದ ಬಗ್ಗೆ ಜನತೆಗೆ ಅರಿವಿದೆ. ಇದರಿಂದಾಗಿ ಪ್ರಿಯಾಂಕಾ ಆಗಮನಕ್ಕೆ ದೇಶಾದ್ಯಂತ ಉತ್ತಮ ಸ್ವಾಗತ ವ್ಯಕ್ತವಾಗಿದೆ ಎಂದರು.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜನಾರ್ದನ ಪೂಜಾರಿ, ಮುಂದಿನ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಿದರೆ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಲ್ಲಿ ಸಮ್ಮಿಶ್ರ ಸರಕಾರ ಐದು ವರ್ಷ ಪೂರ್ಣಗೊಳಿಸುತ್ತದೆ. ದೇವೇಗೌಡರಿಂದ ರಾಜ್ಯದ ಸಮ್ಮಿಶ್ರ ಸರಕಾರ ಉಳಿದಿದೆ ಎಂದು ಪೂಜಾರಿ ನುಡಿದರು.
Click this button or press Ctrl+G to toggle between Kannada and English