ಮೂಡಬಿದಿರೆ: ಉಜಿರೆಯ ಎಸ್ಡಿಎಂ ಕಾಲೇಜಿನಿಂದ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ಹಾಗೂ ಸ್ಪರ್ಧೆ ’ಎಸ್ಡಿಎಂ ಝೇಂಕಾರ್-2019’ ನಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ನಾರಾಗಿ ಮೂಡಿಬಂದರು.
ಮ್ಯಾನೇಜ್ಮೆಂಟ್ ಮೇಸ್ಟ್ರೋ ಸ್ಪರ್ಧೆಯಲ್ಲಿ ತೆನ್ಜಿಲ್ ನಿಹಮದ್ ಹಾಗೂ ಕ್ರಿಸ್ ಡಿಸೋಜಾ ತಂಡ ಪ್ರಥಮ, ರಮ್ಯ ಕಾರಂತ, ವಿಯೋನಾ ಗುಪ್ತಾ, ನಿಸರ್ಗ, ಸ್ವಸ್ತಿ ಉಪಾಧ್ಯ, ಪ್ರತೀಕ್ಷಾ, ರಿತಿಕಾ, ನಿಖಿಲ್, ಕ್ರಿಸ್ ಡಿಸೋಜಾ ತಂಡ ಯೂತ್ ಆನ್ ರ್ಯಾಂಪ್ನಲ್ಲಿ ಪ್ರಥಮ, ಸೈನ್ಸ್ ಕಾರ್ನಿವಲ್ನಲ್ಲಿ ಅನ್ವಯ್ ಹಾಗೂ ಅಭಿಷೇಕ್ ತಂಡ ಪ್ರಥಮ, ಸೈನ್ಸ್ ಡಿಬೇಟ್ ಹಾಗೂ ಸೈನ್ಸ್ ಕ್ವಿಝ್ನಲ್ಲಿ ಆದರ್ಶ ಜೆ ಹಾಗೂ ವಿಯೋನಾ ಗುಪ್ತಾ ತಂಡ ದ್ವಿತೀಯ, ಆಳ್ವಾಸ್ನ ಕ್ಷಮಿತ್ ಎಸ್ ಜೈನ್ ಮಿಸ್ಟರ್ ಝೇಂಕಾರ್ ಆಗಿ ಹೊರ ಹೊಮ್ಮಿದರು. ಸೈನ್ಸ್ ಕಾರ್ನಿವಲ್ ,ಸೈನ್ಸ್ ಡಿಬೇಟ್ ಹಾಗೂ ಮ್ಯಾನೇಜ್ಮೆಂಟ್ ಮೇಸ್ಟ್ರೋಗೆ ರೂ 2000 ನಗದು, ಯೂತ್ ಆನ್ ರ್ಯಾಂಪ್ ಸ್ಪರ್ಧೆಗೆ ರೂ 3000 ನಗದು ಹಾಗೂ ಮಿಸ್ಟರ್ ಝೇಂಕಾರ್ಗೆ ರೂ 1500 ನಗದು, ಜೊತೆಗೆ ಸಮಗ್ರ ಚಾಂಪಿಯನ್ಶಿಫ್ ಪ್ರಶಸ್ತಿಗೆ ರೂ 5000 ನಗದು ಬಹುಮಾನವನ್ನು ಪಡೆದರು.
ಸೈನ್ಸ್ ವಿಭಾಗದ ಡೀನ್ ರಮ್ಯ ರೈ ಪಿ ಡಿ ಹಾಗೂ ಉಪನ್ಯಾಸಕಿ ನೇಹಾ ಭಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪಾಚಾರ್ಯ ಪ್ರೋ ಕುರಿಯನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English