ಮಂಗಳೂರು : ನಗರ ಉರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣದ ಆರೋಪಿ ಮನೆಗೆಲಸದಾಕೆಯನ್ನು ಖಚಿತ ಮಾಹಿತಿ ಮೇರೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ಕಳವು ಮಾಡಿದ ಸುಮಾರು 8.200 ಗ್ರಾಂ ತೂಕದ ಸುಮಾರು 30.000/- ರೂ ಮೌಲ್ಯದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಉರ್ವ ಠಾಣಾ ಪೊಲೀಸರು ಯಶಸ್ವಿಯಾಗಿರುತ್ತಾರೆ.
ದಿನಾಂಕ 04-01-2019 ರಂದು ಶ್ರೀಮತಿ ದೀಪ್ತಿ ತನ್ನ ಗಂಡನೊಂದಿಗೆ ಕೆಲಸದಾಕೆ ಸೌಂದರ್ಯ ಎಂಬಾಕೆಯನ್ನು ಜೊತೆಯಲ್ಲಿ ಕರೆದುಕೊಂಡು ಕಾರವಾರದ ಸಂಬಂಧಿಕರ ವಿವಾಹದ ಔತಣಕೂಟಕ್ಕೆ ತೆರಳಿದವರು ದಿನಾಂಕ 05-01-2019 ರಂದು ಗೋವಾ ಮುಂತಾದ ಕಡೆ ಸಂಚರಿಸಿ, ದಿನಾಂಕ 08-01-2019 ರಂದು ಮಂಗಳೂರಿನ ಮನೆಗೆ ರಾತ್ರಿ 8.00 ಗಂಟೆಗೆ ತಲುಪಿ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇರಿಸಿದ್ದ ಚಿನ್ನದ ಸರವನ್ನು ತೆಗೆಯಲು ನೋಡಿದಾಗ ಚಿನ್ನದ ಸರ ಇರದೇ ಇದ್ದ ಬಗ್ಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆ ಮಾಡಲಾಯಿತು.
ಆರೋಪಿ ಕುಮಾರಿ ಸೌಂದರ್ಯ, ಪ್ರಾಯ 18, ತಂದೆ- ಹುಲ್ಲಪ್ಪ ಮಾದರ, ವಾಸ- ಜೆ.ಬಿ ಲೋಬೋ 2 ನೇ ಅಡ್ಡ ರಸ್ತೆ, ಸುಬ್ರಮಣ್ಯಪುರ, ಕೊಟ್ಟಾರ, ಅಶೋಕನಗರ, ಮಂಗಳೂರು ದೀಪ್ತಿ ಮನೆಯಲ್ಲಿ ಕೆಲೆಸಕ್ಕಿದ್ದರು.
ಈಕೆಯು ತಂದೆ ತಾಯಿ ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು, ಉದ್ಯೋಗದ ನಿಮಿತ್ತ ಮಂಗಳೂರಿನಲ್ಲಿ ನೆಲೆಸಿರುತ್ತಾರೆ. ಆರೋಪಿಯ ವಿರುದ್ದ ಬೆಂಗಳೂರಿನ ಠಾಣೆಯೊಂದರಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಬಂದ ಬಳಿಕ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿದೆ.
ಸದ್ರಿ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಉರ್ವ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English