ದ.ಕ ಜಿಲ್ಲೆಯ ಕಾಂಗ್ರೆಸ್ ನಾಯಕರು ಲೋಕಸಭಾ ಸದಸ್ಯನಾಗಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾರೆ : ಕಾಮತ್

2:18 PM, Wednesday, January 30th, 2019
Share
1 Star2 Stars3 Stars4 Stars5 Stars
(No Ratings Yet)
Loading...

Vedavyas ಮಂಗಳೂರು: ಲೋಕಸಭಾ ಸದಸ್ಯನಾಗಬೇಕೆಂದು ದ.ಕ ಜಿಲ್ಲೆಯ ಕಾಂಗ್ರೆಸ್ ನಾಯಕರು  ಪಾದಯಾತ್ರೆ ಮಾಡುತ್ತಿದ್ದಾರೆ . ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆಗೆ ನಡೆಸುತ್ತಿರುವ ಪಾದಯಾತ್ರೆ ಬಹಳ ಹಾಸ್ಯಾಸ್ಪದವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ದೂರಿದರು.

ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ  ಮಾತನಾಡಿದ ಅವರು, ಇದಕ್ಕೆ ಕಾರಣೀಕರ್ತರು ಕಾಂಗ್ರೆಸ್ನವರು. ಆದರೆ ಗೂಬೆ ಕೂರಿಸುವುದು ಸಂಸದ ನಳಿನ್ ಕುಮಾರ್ ಮೇಲೆ  ಅಂದು ಸಂಸದರು ಎನ್.ಎಚ್ ಬಗ್ಗೆ ಮೀಟಿಂಗ್ ಕರೆದಾಗ ಜೆ.ಆರ್.ಲೋಬೋ‌ ಹಾಗೂ ಇನ್ನಿತರ ಶಾಸಕರು ಬಾರದೆ, ನಾಲ್ಕೂವರೆ ವರ್ಷಕ್ಕೂ ಮೇಲೂ ಸುಮ್ಮನಿದ್ದು, ಇಂದು ಚುನಾವಣೆ ಹತ್ತಿರ ಬಂದಾಗ ಬೀದಿ ನಾಟಕ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಬಂದಾಗ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇಡೀ ಜಿಲ್ಲೆಗಳಲ್ಲಿ ಯಾವುದಾದರೊಂದು ವಿಷಯದಲ್ಲಿ ರಾಜಕೀಯವಾಗಿ ಲಾಭ ಪಡೆದು ತಾನು ಲೋಕಸಭಾ ಸದಸ್ಯನಾಗಬೇಕೆಂದು ಟಿಕೆಟ್ ಆಕಾಂಕ್ಷಿಗಳ ರನ್ನಿಂಗ್ ರೇಸ್ ನಡೆಯುತ್ತಿದೆ. ಅದಕ್ಕಾಗಿ ಎಲ್ಲರಿಗೆ ಸಿಗುವ ವಿಷಯ ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಎಂದು ಅವರು ವ್ಯಂಗ್ಯ ಮಾಡಿದರು.

ಕಾಂಗ್ರೆಸ್ ಆಡಳಿತ ಇರುವ ಕಡೆಗಳಲ್ಲಿ ರಸ್ತೆ ಹೊಂಡಗಳಿಲ್ಲ ಎಂದು ಸಚಿವ ಯು.ಟಿ‌.ಖಾದರ್ ಹೇಳುತ್ತಾರೆ. ಆದರೆ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಹೊಂಡಗಳಿರುವುದು, ಅಲ್ಲಲ್ಲಿ ಕಸ ಹಾಗೂ ಹೆಚ್ಚು ದುರ್ವಾಸನೆಯಿರುವುದು ಸಚಿವ ಖಾದರ್ರವರ ಉಳ್ಳಾಲ ಕ್ಷೇತ್ರದಲ್ಲಿ. ಅವರಿಗೆ ಗುಂಡಿಗಳು ಕಾಣಿಸದಿದ್ದರೆ ನಾನು ತೋರಿಸಿಕೊಡುತ್ತೇನೆ ಎಂದು ತಿರುಗೇಟು ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English