ಕೋಮುಭಾವನೆಯನ್ನು ಕೆರಳಿಸುವ ಸಮಾವೇಶಕ್ಕೆ ಅವಕಾಶ ನೀಡದಂತೆ ಪೊಲೀಸ್ ಅಧೀಕ್ಷಕರಿಗೆ ಮನವಿ

2:31 PM, Thursday, February 7th, 2019
Share
1 Star2 Stars3 Stars4 Stars5 Stars
(No Ratings Yet)
Loading...

HJJSಮಂಗಳೂರು : ಫೆಬ್ರವರಿ 8 ರ ಶುಕ್ರವಾರದಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಸುವರ್ಣ ವಾರ್ತಾವಾಹಿನಿಯ ನಿರೂಪಕ ಅಜಿತ ಹನುಮಕ್ಕನವರ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜನೆ ಮಾಡಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಾರ್ತೆಗಳು ಪ್ರಸಾರವಾಗುತ್ತಿದೆ. ಇದರ ಅನ್ವಯ ಅಜಿತ ಹನುಮಕ್ಕನವರ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಕೆಲವೊಂದು ಮತಾಂಧ ಸಂಘಟನೆಗಳು ಬಹುದೊಡ್ಡ ಪ್ರಮಾಣದಲ್ಲಿ ಸೇರುವ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇದ್ದು ಈ ಮೂಲಕ ಕೋಮುಭಾವನೆ ಕೆರಳಿಸಿ ಸಾಮಾಜಿಕ ಶಾಂತಿ ಕದಡುವ ಭಯಾನಕ ಸಂಚಿರುವ ಗುಮಾನಿ ಗಮನಕ್ಕೆ ಬರುತ್ತದೆ. ಹಾಗಾಗಿ ಇಂತಹ ಸಭೆಗಳಿಗೆ ಅವಕಾಶ ನೀಡಬಾರದೆಂದು ನಗರದ ಪೊಲೀಸ್ ಆಯುಕ್ತರಿಗೆ ಮನವಿ ನೀಡಲಾಯಿತು.

ಈ ವೇಳೆ ಶ್ರೀ.ಹರೀಶ ಶೆಟ್ಟಿ ಬೊಕ್ಕಪಟ್ಟಣ, ಶ್ರೀರಾಮ ಸೇನೆ ಜಿಲ್ಲಾ ಕಾರ್ಯದರ್ಶಿ, ಶ್ರೀ.ವೆಂಕಟೇಶ ಪಡಿಯಾರ್, ಶ್ರೀರಾಮ ಸೇನೆಯ ನಗರ ಉಪಾಧ್ಯಕ್ಷರು, ಶ್ರೀ. ವೀರಪ್ಪ ಮೂಡುಶೆಡ್ಡೆ, ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷರು, ಶ್ರೀ. ಸುರೇಶ ಕೊಟ್ಟಾರಿ, ಹಿಂದೂ ಯುವ ಸೇನೆಯ ಗಣೇಶೋತ್ಸವ ಮಂಡಳಿಯ ಕೋಶಾಧಿಕಾರಿ, ಶ್ರೀ. ಧರ್ಮೇಂದ್ರ, ಹಿಂದೂ ಮಹಾಸಭಾದ ರಾಜ್ಯ ಪ್ರಧಾನಕಾರ್ಯದರ್ಶಿ, ಶ್ರೀ. ಚಂದ್ರ ಮೋಗೇರ್, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆಯ ಸಮನ್ವಯಕರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ವಿಶೇಷವಾಗಿ ಮಂಗಳೂರು ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿದೆ. ಈ ಹಿಂದೆಯೂ ಕೋಮುಗಲಭೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗಿದೆ. ಅದು ಪುನಃ ಮರುಕಳಿಸುವ ಸಾಧ್ಯತೆಗಳು ಇದೆ. ಈ ಹಿಂದೆಯೂ ೨೦೧೨ ರಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕೋಮುಗಲಭೆ ಸೃಷ್ಟಿಸಿ 10 ಕೋಟಿಗೂ ಅಧಿಕ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಹಾಗೂ ಮಾಧ್ಯಮಗಳ ವಾಹನಗಳಿಗೆ ಹಾನಿ ಮಾಡಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ಈಗಾಗಲೇ ಹಲವು ಕೋಮು ದಳ್ಳುರಿಯಿಂದ ಬಳಲಿದೆ. ಹಾಗಾಗಿ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಬಾರದು. ಒಂದುವೇಳೆ ಅವಕಾಶ ಮಾಡಿಕೊಟ್ಟರೆ ಅದರಿಂದ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ಇಂತಹ ಸಮಾವೇಶಗಳಲ್ಲಿ ಕೋಮುಭಾವನೆಯನ್ನು ಕೆರಳಿಸುವ ಪ್ರಚೋದನೆಯನ್ನು ಮಾಡುವ ದ್ವೇಷವನ್ನು ಬಿತ್ತುವ, ಗಲಭೆಗೆ ಕಾರಣವಾಗುವಂತಹ ಭಾಷಣಗಳು, ಪ್ರಚೋದನೆಗಳು, ಪ್ರಭೋಧನೆಗಳು ಆಗುವ ಸಾಧ್ಯತೆ ಇದ್ದು ಅಲ್ಲದೇ ಇದರ ದುರ್ಲಾಭ ಪಡೆದು ಕೆಲವು ಮತಾಂಧ ಸಂಘಟನೆಗಳು ಸಾಮಾಜಿಕ ಶಾಂತಿ ಕದಡುವ ಪ್ರಯತ್ನ ಮಾಡಬಹುದು. ಅದಕ್ಕೋಸ್ಕರ ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಈ ಸಮಾವೇಶಕ್ಕೆ ಯಾವುದೇ ಕಾರಣಕ್ಕೂ ಮಂಗಳೂರು ಕೇಂದ್ರ ಮೈದಾನದಲ್ಲಿ ಅವಕಾಶ ಮಾಡಿಕೊಡಬಾರದು ಎಂದು ಮೇಲಿನ ಸಂಘಟನೆಗಳು ಮನವಿಯಲ್ಲಿ ವಿನಂತಿಸಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English