ಮಟ್ಕಾ : ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಇಬ್ಬರ ಬಂಧನ

2:35 PM, Thursday, February 7th, 2019
Share
1 Star2 Stars3 Stars4 Stars5 Stars
(No Ratings Yet)
Loading...

matkaಮಂಗಳೂರು : ನಗರ ಬರ್ಕೆ ಠಾಣಾ ವ್ಯಾಪ್ತಿಯ ಬರ್ಕೆ ಸಂಕದ ಹತ್ತಿರ ಮಂಗಳವಾರ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಎಂಬ ಅದೃಷ್ಟ ಆಟದ ಚೀಟಿ ಬರೆದು ಹಣ ಸಂಗ್ರಹ ಮಾಡುತ್ತಿದ್ದ, ಇಬ್ಬರು ಯುವಕರನ್ನು ವಶಕ್ಕೆ ಪಡೆದು ಕಲಂ: 78(3), ಕೆ.ಪಿ ಆಕ್ಟ್ ಕಾಯ್ದೆಯಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರುಗಳಿಂದ ರೂ. 15,400/- ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಶಾಂತ್ ಕುಮಾರ್ (42), ವಾಸ: ರಾಮ ಮೇಸ್ತ್ರಿ ಕಂಪೌಂಡ್, ಮಣ್ಣಗುಡ್ಡ, ಮಂಗಳೂರು. ಅಬ್ದುಲ್ ಲತೀಫ್( 45), ವಾಸ: ಸರಕಾರಿ ಪ್ರೌಢಶಾಲೆ ಹತ್ತಿರ, ಮಣ್ಣಗುಡ್ಡ, ಮಂಗಳೂರು ದಸ್ತಗಿರಿಗೊಳಗಾದ ಆರೋಪಿಗಳು.

ಈ ಕಾರ್ಯಚರಣೆಯಲ್ಲಿ ಕಬ್ಬಳ್ ರಾಜ್, ಪಿಎಸ್.ಐ(ಸಿಸಿಬಿ) ಮತ್ತು ಬರ್ಕೆ ಪೊಲೀಸ್ ಠಾಣಾ ಅಪರಾಧ ವಿಭಾಗದ ಪೊಲೀಸ್ ಉಪ-ನಿರೀಕ್ಷರಾದ ಕು.ಶೋಭಾ ರವರ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು, ಎಎಸ್ಐ ಲೋಕೇಶ್ವರ ಹಾಗೂ ಠಾಣಾ ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English