ಧರ್ಮಸ್ಥಳದಲ್ಲಿ ಎಂ. ವೀರಪ್ಪ ಮೊಯಿಲಿ ರಚಿಸಿದ ಬಾಹುಬಲಿ ಅಹಿಂಸಾ ದಿಗ್ವಿಜಯಂ ಗ್ರಂಥ ಬಿಡುಗಡೆ 

12:57 AM, Friday, February 15th, 2019
Share
1 Star2 Stars3 Stars4 Stars5 Stars
(No Ratings Yet)
Loading...

veerappa-moilyಧರ್ಮಸ್ಥಳ : ಜೈನಧರ್ಮದ ಬಾಹುಬಲಿ ಅಹಿಂಸಾ ದಿಗ್ವಿಜಯಂ ಗದ್ಯಾನುವಾದದ ಗ್ರಂಥ ಬರೆಯುವಾಗ ನನ್ನನ್ನು ನಾನು ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಯಿತು. ಗ್ರಂಥದ ಗದ್ಯಾನುಸಾರ ಮಾಡಲು ಪ್ರಾರಂಭಿಸಿದ ಮೇಲೆ ನನಗೆ ಕೋಪ ಬರುವುದಿಲ್ಲ. ಯಾರಲ್ಲಿಯೂ ಸಿಟ್ಟು ಮಾಡುವುದಿಲ್ಲ. ಯಾವಾಗಲೂ ಶಾಂತಿ, ನೆಮ್ಮದಿಯಿಂದ ಇದ್ದೇನೆ ಎಂದು ತನ್ನ ಸ್ವಾನುಭವವನ್ನು ವಿವರಿಸಿದವರು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ವೇಯಿಲಿ ಅವರು.
ಸಂದರ್ಭ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಗುರುವಾರ ಅಮೃತವರ್ಷಿಣಿಯಲ್ಲಿ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಧನ್ಯತೆಯಿಂದ ಅವರು ಮಾತನಾಡಿದರು.

ಮೂರು ವರ್ಷಗಳಿಂದ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು ಈ ಕಾರ್ಯ ಮಾಡಬೇಕೆಂದು ತನಗೆ ಒತ್ತಾಯಿಸಿದರು. ಬಾಹುಬಲಿಗೆ ನಿಮ್ಮಿಂದ ಕಾವ್ಯಾಭಿಷೇಕ ಆಗಬೇಕು ಎಂದು ತಿಳಿಸಿದ ಮೇರೆಗೆ ತಾನು ಈ ಪ್ರಯತ್ನ ಮಾಡಿದೆ. ಜೈನಕಾಶಿ ಮೂಡಬಿದ್ರೆಯಲ್ಲಿ ಜೈನ್ ಹೈಸ್ಕೂಲಿನಲ್ಲಿ ತನ್ನ ವಿದ್ಯಾ ಗುರುಗಳಾಗಿದ್ದ ಟಿ. ರಘುಚಂದ್ರ ಶೆಟ್ಟಿ ಅವರ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಬಾಹುಬಲಿ ಅಹಿಂಸೆ, ಪ್ರೀತಿ, ಶಾಂತಿ, ತ್ಯಾಗ, ಸಂಯಮದ ಸಾಕಾರ ಮೂರ್ತಿ. ಕ್ರೋಧದ ಕಾವಿನ ಎದುರು ನಾವು ಶಾಂತವಾಗಿದ್ದರೆ ನಮಗೆ ಸದಾ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಮೊಯಿಲಿ ಅಭಿಪ್ರಾಯ ಪಟ್ಟರು.

ಆದಿಪುರಾಣ ಗ್ರಂಥವನ್ನು ಪೂಜ್ಯ ಸಿದ್ಧಸೇನಾಚಾರ್ಯ ಮುನಿಮಹಾರಾಜರು ಬಿಡುಗಡೆಗೊಳಿಸಿದರು.
ಬಂಟ್ವಾಳದ ಇರ್ವತ್ತೂರು ಬೀಡು ವಿಜಯಾ ಜಿ. ಜೈನ್ ಬರೆದ ಧರ್ಮಸ್ಥಳದ ಶ್ರೀ ಗೊಮ್ಮಟೇಶ್ವರ ಚರಿತ್ರೆ ಕೃತಿಯನ್ನು ಪೂಜ್ಯ ವೀರ ಸಾಗರ ಮುನಿ ಮಹಾರಾಜರು ಬಿಡುಗಡೆಗೊಳಿಸಿದರು.

ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, 1959 ರಲ್ಲಿ ಧರ್ಮಸ್ಥಳದಲ್ಲಿ ತಾನು ಮಾಡಿದ ಮೊದಲ ಭಾಷಣವನ್ನು ಧನ್ಯತೆಯಿಂದ ಸ್ಮರಿಸಿ ವೀರೇಂದ್ರ ಹೆಗ್ಗಡೆಯವರ ಕುಟುಂಬದವರ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English