ಕೊಟ್ಟಾಯಂ ರೈಲು ನಿಲ್ದಾಣದಿಂದ 11 ಕಿ.ಮೀ ದೂರದಲ್ಲಿ, ಎಟ್ಟಮನೂರ್‌ನಲ್ಲಿರುವ ಮಹಾದೇವ ದೇವಸ್ಥಾನ ಕೇರಳದ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಕೊಟ್ಟಾಯಂ ಮತ್ತು ಕೊಚ್ಚಿ ಬಳಿ ಭೇಟಿ ನೀಡಲು ಇದು ಒಂದು ಜನಪ್ರಿಯ ಪ್ರವಾಸಿ ಯಾತ್ರಾ ಸ್ಥಳ.
ಈ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ದೀಪ ಸ್ಥಂಭವು ಸುಮಾರು 450 ವರ್ಷಗಳಿಂದ ಉರಿಯುತ್ತಲಿದೆಯಂತೆ. ಕೇರಳದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ಚಿನ್ನದ ಆನೆಯೂ ಇದೆ.
ಈ ದೇವಾಲಯವು ಅಸಾಧಾರಣವಾದ ಭಿತ್ತಿಚಿತ್ರಗಳು ಮತ್ತು 16 ನೇ ಶತಮಾನದಲ್ಲಿ ಮಾಡಲಾದ ವಾಸ್ತುಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಹಿಂದೂ ಮಹಾಕಾವ್ಯಗಳು, ರಾಮಾಯಣ ಮತ್ತು ಮಹಾಭಾರತ ಮತ್ತು ಪುರಾಣಗಳ ಭಿತ್ತಿಚಿತ್ರಗಳನ್ನು ಕಾಣಬಹುದು. ದೇವಸ್ಥಾನದ ಪ್ರವೇಶದ್ವಾರದಲ್ಲಿ ಒಂದು ತೈಲ ದೀಪವಿದೆ. ಇದು 450 ವರ್ಷಗಳಿಗೂ ಹಿಂದಿನದು ಎಂದು ನಂಬಲಾಗಿದೆ . ಇಲ್ಲಿ ದಿನನಿತ್ಯ ಭಕ್ತರು ಬಂದು ಎಣ್ಣೆಯನ್ನು ಹಾಕುತ್ತಾರೆ . 16 ನೇ ಶತಮಾನದಲ್ಲಿ ನಿರ್ಮಿಸಲಾದ 14 ಅಲಂಕಾರಿಕ ಗೋಪುರಗಳು ಈ ದೇವಸ್ಥಾನದಲ್ಲಿದೆ.
ದೇವಾಲಯದ ಮತ್ತೊಂದು ಆಕರ್ಷಣೆಯೆಂದರೆ ಈಜಾರಾ ಪುರಾನಾ (ಚಿನ್ನದ ಆನೆಗಳು) . ಇದನ್ನು ಟ್ರಾವಂಕೂರು ಮಹಾರಾಜರು ದೇವಾಲಯಕ್ಕೆ ದೇಣಿಗೆ ನೀಡಿದ್ದರು . ಗೋಲ್ಡನ್ ಆನೆಗಳನ್ನು ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಕೇವಲ ಹಿಂದೂಗಳು ಮಾತ್ರ ಪ್ರವೇಶಿಸಬಹುದು.
ಎಝಾರಪೋನನ್ನಾ ಎಜುನಾಲ್ಲತು ಎನ್ನುವುದು ಇಲ್ಲಿನ ಪ್ರಮುಖ ವಾರ್ಷಿಕ ಉತ್ಸವವಾಗಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ 10 ದಿನಗಳ ಕಾಲ ಆಚರಿಸಲಾಗುತ್ತದೆ. ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ12.30 ರವರೆಗೆ ಮತ್ತು ಸಂಜೆ 5 ರಿಂದ 8 ಗಂಟೆಯವರೆಗೆ ಈ ದೇವಸ್ಥಾನವು ತೆರೆದಿರುತ್ತದೆ.
ದಂತಕಥೆಯ ಪ್ರಕಾರ, ಖುರಾ ಎಂದು ಕರೆಯಲ್ಪಡುವ ಅಸುರನು ಶಿವನಿಂದ ಮೂರು ಶಿವಲಿಂಗಗಳನ್ನು ಪಡೆದುಕೊಂಡಿದ್ದ. ಅಸುರನು ಆ ಶಿವಲಿಂಗಗಳನ್ನು ಕೇರಳಕ್ಕೆ ಕೊಂಡೊಯ್ದನು, ಒಂದು ಶಿವಲಿಂಗವನ್ನು ಹಲ್ಲಿನಲ್ಲಿ ಇನ್ನೊಂದನ್ನು ಎಡ ಕೈಯಲ್ಲಿ ಹಿಡಿದಿಟ್ಟು ಮತ್ತೊಂದನ್ನು ತನ್ನ ಬಲ ಗೈಯಲ್ಲಿ ಹಿಡಿದಿದ್ದರು. ತನ್ನ ಹಲ್ಲುಗಳಿಂದ ಹಿಡಿದಿದ್ದ ಲಿಂಗವನ್ನು ಕತುತುರುತಿನಲ್ಲಿ, ಬಲಗೈಯಲ್ಲಿ ಹಿಡಿದಿದ್ದ ಲಿಂಗವನ್ನು ವೈಕಮ್‌ನಲ್ಲಿ ಹಾಗೂ ಎಡಗೈಯಲ್ಲಿದ್ದದನ್ನು ಎಟ್ಟುಮನೂರಿನಲ್ಲಿ ಸ್ಥಾಪಿಸಲಾಯಿತು.
ಈ ದೇವಾಲಯದಲ್ಲಿ ಪಾಂಡವರು ಮತ್ತು ವ್ಯಾಸ ಋಷಿ ಪೂಜಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಕ್ರಿ.ಶ. 1542 ರಲ್ಲಿ ಪ್ರಾಚೀನ ದೇವಾಲಯವನ್ನು ಪುನರ್ನಿರ್ಮಿಸಲಾಯಿತು. ಈ ದೇವಸ್ಥಾನವನ್ನು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಗೋಡೆಗಳಲ್ಲಿ ದ್ರಾವಿಡ ಶೈಲಿಯ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ.
Click this button or press Ctrl+G to toggle between Kannada and English