ಮಂಗಳೂರು : ಮಂಗಳೂರು-ಬೆಂಗಳೂರು ನೂತನ ರೈಲು ಸಂಚಾರಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಈ ಹೊಸ ರೈಲು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ. ಸದ್ಯಕ್ಕೆ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುವ ರೈಲು ಮಾರ್ಚ್‌ನ ಆನಂತರ ಪ್ರತೀ ದಿನ ರಾತ್ರಿ ವೇಳೆ ಸಂಚರಿಸಲಿದೆ ಎಂದು ಹೇಳಲಾಗಿದೆ.
ಮಂಗಳೂರಿನಿಂದ ಸೋಮವಾರ, ಬುಧವಾರ, ಶುಕ್ರವಾರ ರಾತ್ರಿ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಯಶವಂತಪುರ ತಲುಪಲಿದೆ. ಭಾನುವಾರ, ಮಂಗಳವಾರ, ಗುರುವಾರ ಸಾಯಂಕಾಲ 4.30 ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗಿನ ಜಾವ 4 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.
ಮಂಗಳೂರು-ಯಶವಂತಪುರ (ರೈಲು ನಂ. 16586) ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 7 ಗಂಟೆಗೆ ಹೊರಟು, ಮಂಗಳೂರು ಜಂಕ್ಷನ್‌ಗೆ 7.15, ಬಂಟ್ವಾಳ 7.48, ಕಬಕ ಪುತ್ತೂರು 8.16, ಸುಬ್ರಹ್ಮಣ್ಯ ರೋಡ್ 9, ಸಕಲೇಶಪುರ 11.35, ಹಾಸನ 12.40, ಚನ್ನರಾಯಪಟ್ಟಣ 1.33, ಶ್ರವಣಬೆಳಗೊಳ 1.48, ಯಡಿಯೂರು 2.38, ನೆಲಮಂಗಲ 3.43, ಯಶವಂತಪುರ 5 ಗಂಟೆಗೆ ತಲುಪಲಿದೆ.
ಯಶವಂತಪುರ-ಮಂಗಳೂರು (ರೈಲು ನಂ.16585) ಸಾಯಂಕಾಲ 4.30ಕ್ಕೆ ಯಶವಂತಪುರದಿಂದ ಹೊರಡುವ ರೈಲು ನೆಲಮಂಗಲಕ್ಕೆ 4.58, ಯಡಿಯೂರು 6, ಶ್ರವಣಬೆಳಗೊಳ 6.48, ಚನ್ನರಾಯಪಟ್ಟಣ 7, ಹಾಸನ 7.55, ಸಕಲೇಶಪುರ 8.15, ಸುಬ್ರಹ್ಮಣ್ಯ ರೋಡ್ 12.25, ಕಬಕ ಪುತ್ತೂರು 1.13, ಬಂಟ್ವಾಳ 1.43, ಮಂಗಳೂರು ಜಂಕ್ಷನ್ 3.13, ಮಂಗಳೂರು ಸೆಂಟ್ರಲ್ 4 ಗಂಟೆಗೆ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ರಾತ್ರಿ ರೈಲಿನಲ್ಲಿ ಟು ಟೈರ್ ಎಸಿ ಕೋಚ್-1, ತ್ರಿ ಟೈರ್ ಎಸಿ ಕೋಚ್-1, ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್-7, ರಿಸರ್ವ್ ಇಲ್ಲದ ಕೋಚ್ ಗಳು -3, ಲಗೇಜು ಹಾಗೂ ಅಂಗವಿಕಲ ಸ್ನೇಹಿ ಕೋಚ್-2 ಸಹಿತ 14 ಕೋಚ್ ಗಳಿರುತ್ತವೆ.
Click this button or press Ctrl+G to toggle between Kannada and English