ಮಂಗಳೂರು : ಮಾರ್ಚ್8 ಮತ್ತು9 ರಂದು ಮಂಗಳೂರಿನ ಬೋಳೂರು ಸುಲ್ತಾನ್ ಬತ್ತೇರಿರಸ್ತೆಯಲ್ಲಿರುವ ಅಮೃತ ವಿದ್ಯಾಲಯದಲ್ಲಿ ಜರುಗಲಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿದೇವಿ – “ಅಮ್ಮ”ನವರ ಕಾರ್ಯಕ್ರಮದ ಪ್ರಯುಕ್ತ ಜರುಗುವ ಬ್ರಹ್ಮಸ್ಥಾನ ಮಹೋತ್ಸವದ ಚಪ್ಪರ ಮುಹೂರ್ತ ಪೂಜೆ ನಡೆಸಲಾಯಿತು.
ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ನೇತೃತ್ವದಲ್ಲಿ ಬ್ರಹ್ಮಚಾರಿರತೀಶ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮಂಗಳೂರು ದಕ್ಷಿಣ ಶಾಸಕ ಶ್ರೀ ವೇದವ್ಯಾಸಕಾಮತ್ ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಿದರು. ಅಮ್ಮನವರ ಕಾರ್ಯಕ್ರಮದ ಪ್ರಯೋಜನ ಹೆಚ್ಚಿನಜನರಿಗೆದೊರೆಯುವಂತೆ ಹಾಗೂ ಆಗಮಿಸುವ ಭಕ್ತರು ಸರದಿಯಲ್ಲಿ ಬಂದುಅಮ್ಮನವರ ಅಪ್ಪುಗೆಯ ವಿಶೇಷ ದರ್ಶನ ಪಡೆಯಲು ಅನುಕೂಲವಾಗುವಂತೆ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳ ಮಾಹಿತಿ ಪಡೆದರು ಮತ್ತು ಸಹಕಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಸಾದ್‌ರಾಜ್‌ಕಾಂಚನ್, ಗೌರವಾಧ್ಯಕ್ಷರಾದ ಡಾ.ಜೀವರಾಜ್ ಸೊರಕೆ,ಸಂಘಟನಾ ಕಾರ್ಯದರ್ಶಿ ಶ್ರೀ ಸುರೇಶ್‌ಅಮೀನ್, ಅಮೃತ ವಿದ್ಯಾಲಯಂ ಪ್ರಾಂಶುಪಾಲರಾದ ಶ್ರೀ ಆರ್.ಪಿ.ಭಟ್,ಉಪ ಪ್ರಾಂಶುಪಾಲೆ ಶ್ರೀಮತಿ ಅನುಪಮಾರಾವ್, ಶೋಭಾರಾಣಿ ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು, ಅಮ್ಮನವರ ಭಕ್ತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English