ದಕ್ಷಿಣ ಕನ್ನಡ ಲೋಕಸಭೆಗೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು ?

7:22 PM, Saturday, March 2nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Satyajithಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ಗೊಂಡ ಇನ್ನೊಂದು ಬಣ ಆರ್ ಎಸ್ ಎಸ್ ನ ಕಟ್ಟಾಳು ಸತ್ಯಜಿತ್ ಸುರತ್ಕಲ್ ಅವರನ್ನು ಈ ಬಾರಿಯ ಲೋಕ ಸಭಾ ಅಭ್ಯಥಿಯನ್ನಾಗಿಸಲು ಸತ ಪ್ರಯತ್ನ ಮಾಡುತ್ತಿದೆ ಅದಕ್ಕಾಗಿ ಅಲ್ಲಲ್ಲಿ ಸತ್ಯಜಿತ್ ಸುರತ್ಕಲ್ ಅವರ ಫ್ಲೆಕ್ಸ್ ಹಾಕಿದ್ದಾರೆ.

ಅಭಿಮಾನಿಗಳು ಜಿಲ್ಲೆಯಾದ್ಯಂತ ಹಾಕಿದ ಫ್ಲೆಕ್ಸ್ ಗಳು ಬಿಜೆಪಿ ಮುಂಖಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಸತ್ಯಜಿತ್ ಅಭಿಮಾನಿಗಳ ಹೆಸರಿನಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸತ್ಯಜಿತ್‌ ನಮ್ಮ ಆಯ್ಕೆ ಎಂಬ ಫ್ಲೆಕ್ಸ್ ಗಳು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಜೆಪಿ ಟಿಕೆಟ್ ಆಕಾಂಕ್ಷಿ ಸತ್ಯಜಿತ್ ಪರ ಅಭಿಮಾನಿಗಳು ಹಾಕಿರುವ ಪ್ಲೆಕ್ಸ್ ಇದೀಗ ರಾಜ್ಯ ನಾಯಕರ ಅಂಗಳಕ್ಕೆ ತಲುಪಿತ್ತು.

ಅಭ್ಯರ್ಥಿಗಳ ಆಯ್ಕೆ ಏನಿದ್ದರೂ ಹೈಕಮಾಂಡಿಗೆ ಬಿಟ್ಟಿದ್ದು ಈಗ ಗೊಂದಲ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ ಎಸ್ ಯಡಿಯೂರಪ್ಪ  ಹೇಳಿದ್ದಾರೆ.   ಈ ಫ್ಲೆಕ್ಸ್ ಗಳ ತೆರವಿಗೆ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಸತ್ಯಜಿತ್ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಮಲ ಪಾಳಯದಲ್ಲಿ ಭುಗಿಲೆದ್ದಿದ್ದ ಅಸಮಾಧಾನ ವನ್ನು ಒಂದು ಹಂತದಲ್ಲಿ ಶಮನ ಮಾಡುವಲ್ಲಿ ಬಿಜೆಪಿ ಹಿರಿಯ ಮುಖಂಡರು ಯಶಸ್ವಿಯಾಗಿದ್ದಾರೆ .

ಜಿಲ್ಲೆಯ ಹಲವೆಡೆ ಸತ್ಯಜಿತ್ ಅವರು ನಮ್ಮ ಆಯ್ಕೆ ಎಂದು ಹಾಕಲಾದ ಪ್ಲೆಕ್ಸ್  ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ . ಇದಕ್ಕೆ ಸ್ಪಂದಿಸಿದ ಸತ್ಯಜಿತ್‌ ತಮ್ಮ ಅಭಿಮಾನಿಗಳಿಗೆ ಪ್ಲೆಕ್ಸ್ ತೆರವು ಮಾಡುವಂತೆ ಸೂಚಿಸಿದ್ದಾರೆ.

ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಾರಿಯೂ ಲೋಕಸಭೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ಈ ನಡುವೆ ಸತ್ಯಜಿತ್ ಸುರತ್ಕಲ್  ಆರ್ ಎಸ್ ಎಸ್  ಮುಖಂಡರ ಇಚ್ಛೆಯಂತೆ ಟಿಕೆಟ್ ಗಾಗಿ ಪೈಪೋಟಿ ಆರಂಭಿಸಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English