ಮಂಗಳೂರು :ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಂಗಳೂರಿನ ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ಭಕ್ತಿ, ಸಂಭ್ರಮದಿಂದ ನಡೆಯಿತು.
ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಹಾಗೂ ಶಿವರಾತ್ರಿ ಮಹೋತ್ಸವ ನಡೆಯುತ್ತದೆ.ಇಂದು ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ಆರಂಭವಾಗಿವೆ. ರುದ್ರ ಮಂತ್ರಗಳಿಂದ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಶಿವತೀರ್ಥ ಸ್ವೀಕರಿ ಸಿ ಭಕ್ತರು ಪುನೀತರಾದರು.
ಕದ್ರಿ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷವಾಗಿ ರುದ್ರಾಭಿಷೇಕ, ಶಿವಪೂಜೆ, ರಾತ್ರಿ ಜಮಾ ಪೂಜೆ, ಉತ್ಸವ ಬಲಿ, ಬೆಳ್ಳಿ ರಥೋತ್ಸವ ಜರಗಲಿದೆ. ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಇಂದು ಮುಂಜಾನೆಯಿಂದ ಮರುದಿನ ಬೆಳಗ್ಗೆವರೆಗೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಶರವು ಮಹಾಗಣಪತಿ ದೇಗುಲದಲ್ಲಿ ಉಷಃಕಾಲ ಪೂಜೆ, ಏಕಾದಶ ರುದ್ರಾಭಿಷೇಕ, ವಿಶೇಷ ಸೀಯಾಳಾಭಿಷೇಕ ನಡೆಯಲಿದೆ. ಸಂಜೆ 7.30ರಿಂದ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ, ಕಾರ್ತಿಕ ಪೂಜೆ, 8ಕ್ಕೆ ಶತರುದ್ರಾಭಿಷೇಕ, ರಂಗಪೂಜೆ, ಮಹಾಪೂಜೆ ಜರಗಲಿದೆ.
ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಕೋಟೇಶ್ವರದ ಶ್ರೀಶಂಕರ ನಾರಾಯಣ ದೇವಸ್ಥಾನ, ಶಂಕರನಾರಾಯಣದ ದೇವಸ್ಥಾನ, ಮಡಿ ಮಲ್ಲಿಕಾರ್ಜುನ ದೇವಸ್ಥಾನ ಮೊದಲಾದೆಡೆಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಪಾರಾಯಣಗಳು ನಡೆದವು.
Click this button or press Ctrl+G to toggle between Kannada and English