ಮಂಗಳೂರು : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದ್ದು. ದೇಶದ ನಾನಾ ಮೂಲೆಗಳಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.
ಮಾರ್ಚ್ 4ರಿಂದ ಆರಂಭ ಗೊಂಡ ಕಾರ್ಯಕ್ರಮಗಳು ಮಾರ್ಚ್ 13 ಕ್ಕೆ ಕೊನೆಗೊಳ್ಳಲಿದೆ. ಈ ಹತ್ತು ದಿನಗಳ ಅವಧಿಯಲ್ಲಿ ಕೊನೆಯ ಮೂರು ದಿನಗಳಲ್ಲಿ ದೇವರ, ಧ್ವಜಸ್ತಂಭ ಪ್ರತಿಷ್ಠೆ, ಜೀವ ಕಲಶಾಭಿಷೇಕ ವೈದಿಕ ವಿಧಿ ವಿಧಾನಗಳು ನಡೆಯುತ್ತದೆ. ಮಾರ್ಚ್ 10 ರ ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ ನಡೆದಿರುವುದು ಭಕ್ತ ಸಮುದಾಯದಲ್ಲಿ ಅಚ್ಚರಿ ಮೂಡಿಸಿದೆ.
ದೇವಳದ ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲಕ್ಕೇರಿಸುತ್ತಿದ್ದಂತೆ ದೇವಾಲಯದ ಮೇಲೆ ಗರುಡ ಒಂದು ಹಾರಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲಕ್ಕೇರಿಸುತ್ತಿದ್ದಂತೆ ಏಕಾಏಕಿ ಪ್ರತ್ಯಕ್ಷವಾದ ಗರುಡವೊಂದು ದೇವಸ್ಥಾನದ ಮೇಲ್ಭಾಗದಿಂದ ಪ್ರದಕ್ಷಿಣೆ ಹಾಕಿದೆ. ಆಗ ಅಲ್ಲಿ ಸೇರಿದ್ದ ಸಾವಿರಾರು ಭಕ್ತರು ಇದನ್ನು ಅಚ್ಚರಿಯಿಂದ ವೀಕ್ಷಿಸಿದ್ದು, ದೇವರೇ ಗರುಡನ ರೂಪದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಧ್ವಜಸ್ತಂಭ ಅಂದರೆ ಗರುಡ ಸ್ತಂಭವೆಂದೇ ಕರೆಯಲಾಗುತ್ತದೆ. ಹೀಗಾಗಿ ಗರುಡ ಒಂದು ಬಾರಿ ಪ್ರದಕ್ಷಿಣೆ ಹಾಕಿ, ಬಳಿಕ ಮಾಯವಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮಂಗಳೂರು ಹೊರವಲಯದ ಪೊಳಲಿ ದೇವಸ್ಥಾನ 1300 ವರ್ಷಗಳ ಇತಿಹಾಸ ಹೊಂದಿದ್ದು ಭಾರೀ ಕಾರಣಿಕದ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.
Click this button or press Ctrl+G to toggle between Kannada and English