ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.13 ಸಂಭ್ರಮದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಅಂಗವಾಗಿ ದೇವಸ್ಥಾನದ ಒಳಗೆ ಪೂಜಾ ಕೈಂಕರ್ಯಗಳು ನಡೆಯುವ ಹಿನ್ನೆಲೆಯಲ್ಲಿ ಭಕ್ತರ ದೇಗುಲ ಪ್ರವೇಶ ಸಮಯದಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ.
ಬೆಳಗ್ಗೆ 4ರಿಂದ 8.10ರ ವರೆಗೆ ಬ್ರಹ್ಮಕಲಶ ನಡೆಯಲಿರುವುದರಿಂದ ಬೆಳಿಗ್ಗೆ 10 ಗಂಟೆಯ ತನಕ ದೇವಾಲಯದ ಒಳಗೆ ಭಕ್ತರ ಪ್ರವೇಶ ನಿಯಂತ್ರಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆ ತನಕ ದೇವರ ದರ್ಶನಕ್ಕೆ ಮುಕ್ತ ಅವಕಾಶವಿದೆ. ಸಂಜೆ ದೇವರಿಗೆ ರಂಗಪೂಜೆ ನಡೆಯಲಿರುವುದರಿಂದ ಸಂಜೆ 5.30ರಿಂದ 8.30 ತನಕ ಭಕ್ತರ ಪ್ರವೇಶವನ್ನು ಮತ್ತೆ ನಿಯಂತ್ರಿಸಲಾಗುತ್ತದೆ, ರಾತ್ರಿ8.30ರ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಇದಕ್ಕೆ ಸಂಪೂರ್ಣ ಸಹಕರಿಸಬೇಕೆಂದು ದೇವಳದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.
ಎಲ್ಇಡಿ ಅಳವಡಿಕೆ:ಬ್ರಹ್ಮಕಲಶೋತ್ಸವದ ಪ್ರಕ್ರಿಯೆಯನ್ನು ವೀಕ್ಷಿಸಲು ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನದ ಪರಿಸರದಲ್ಲಿ ಅಲ್ಲಲ್ಲಿ ಒಟ್ಟು 10ಕ್ಕೂ ಅಧಿಕ ಎಲ್ಇಡಿ ಸ್ಕ್ರೀನ್ ಗಳನ್ ಅಳವಡಿಸಲಾಗಿದೆ.
Click this button or press Ctrl+G to toggle between Kannada and English