ತುಳುನಾಡ ಕೃಷಿಕರ ಸಂಸ್ಕೃತಿಯ ಅನಾವರಣ ಹಾಗೂ ಕೃಷಿ ಸಾಧಕರಿಗೆ ಸನ್ಮಾನ

11:32 AM, Thursday, March 14th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

miftಮಂಗಳೂರು  : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಅತ್ತಾವರದ ಮಿಫ್ಟ್ ಕಾಲೇಜಿನವರ ಸಹಯೋಗದೊಂದಿಗೆ ಮಂಗಳೂರಿನ ಪುರಭವನದಲ್ಲಿ ಮಿಫ್ಟ್ ಕಾಲೇಜಿನ ವಿದ್ಯಾರ್ಥಿಗಳಿಂದ ನೇಗಿಲ ಯೋಗಿಯ ಕಾಯಕ ನಡಿಗೆ ಕಾರ‍್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ 08.03.2019 ರಂದು ಸಂಜೆ 5.30 ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ.ಸಿ.ಭಂಡಾರಿ ರವರು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಹಾಗೂ ಮಂಗಳೂರು ಮನ್‌ದೇವ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಬಿ.ನಾಗರಾಜ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಅದಾನಿಯ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಕಿಶೋರ್ ಆಳ್ವ, ನವದೆಹಲಿ ಸುಪ್ರೀಂ ಕೋರ್ಟ್‌ನ ಪ್ಯಾನಲ್ ವಕೀಲರಾದ ಶ್ರೀ ರಾಘವೇಂದ್ರ ರಾವ್ ಮತ್ತು ಕಾವೂರು ಭಂಟರ ಸಂಘದ ಅಧ್ಯಕ್ಷರಾದ ರೊ| ಆನಂದ್ ಶೆಟ್ಟಿ ಯವರು ಅತಿಥಿಗಳಾಗಿ ಭಾಗವಹಿಸಲಿರುವರು.

miftಈ ಕಾರ‍್ಯಕ್ರಮದಲ್ಲಿ ಕೃಷಿಕರಾದ ಕೋಡಿಮಜಲಿನ ಶ್ರೀ ಅಡ್ಯಾರು ಪ್ರದೀಪ್ ಕುಮಾರ್ ಶೆಟ್ಟಿ, ಕಾಟು ಕುಕ್ಕೆಯ ಶ್ರೀ ಬಿ.ಎಸ್. ಗಾಂಭೀರ, ಬೆಳ್ಳಾರೆಯ ಶ್ರೀ ಕೆ. ಸತ್ಯನಾರಾಯಣ ಭಟ್, ಪೀಲಿಯಡ್ಕದ ಶ್ರೀ ದೇವಪ್ಪ ಶೇಕ ಮತ್ತು ಮೂಡಬಿದ್ರೆಯ ಶ್ರೀ ಶಿವ ಎಲ್.ಪೂಜಾರಿ ರವರನ್ನು ಸನ್ಮಾನಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ತುಳು ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English