ಮಂಗಳೂರು: ದ.ಕನ್ನಡ ಸಾಹಿತ್ಯ ಪರಿಷತ್ ಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು 106 ಮತಗಳಿಂದ ಜಯಸಾಧಿಸಿ, ಸತತ ನಾಲ್ಕನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಕಲ್ಕೂರ ಅವರು 464 ಮತಗಳು ಗಳಿಸಿದರೆ ಅವರ ಸಮೀಪದ ಪ್ರತಿಸ್ಪರ್ಧಿ, ಮಂಗಳೂರು ತಾಲೂಕು ಕಸಪಾ ನಿಕಟಪೂರ್ವ ಅಧ್ಯಕ್ಷ ಸರ್ವೋತ್ತಮ ಅಂಚನ್ ಅವರು 358 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೋರ್ವ ಅಭ್ಯರ್ಥಿ ಹರೀಶ್ ಬಂಟ್ವಾಳ್ ಅವರು 149 ಮತಗಳನ್ನು ಗಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಒಟ್ಟು 1932 ಮತದಾರರ ಪೈಕಿ 974 ಮಂದಿ ಮತ ಚಲಾಯಿಸಿದ್ದರು. 971 ಮತಗಳು ಕ್ರಮಬದ್ಧವಾಗಿದ್ದು 3 ಮತಗಳು ಅಸಿಂಧುಗೊಂಡಿದವು.
ಪ್ರದೀಪ್ ಕುಮಾರ್ ಕಲ್ಕೂರ ಅವರು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಮುನ್ನಡೆ ಸಾಧಿಸಿದರೆ ಸರ್ವೋತ್ತಮ ಅಂಚನ್ ಅವರು ಮಂಗಳೂರು ತಾಲೂಕಿನಲ್ಲಿ ಮುನ್ನಡೆ ಸಾಧಿಸಿದ್ದರು. ಹರೀಶ್ ಬಂಟ್ವಾಳ್ ಅವರು ಸುಳ್ಯ ಭಾರೀ ಮುನ್ನಡೆ ದಾಖಲಿಸಿದ್ದರು.
ಮಂಗಳೂರು ತಾಲೂಕಿನಲ್ಲಿ ಪ್ರದೀಪ್ ಕುಮಾರ್ ಕಲ್ಕೂರ – 192, ಸರ್ವೋತ್ತಮ ಅಂಚನ್- 272, ಹರೀಶ್ ಬಂಟ್ವಾಳ್ – 6 ಮತಗಳನ್ನು ಗಳಿಸಿದ್ದಾರೆ. 2 ಮತಗಳು ತಿರಸ್ಕೃತಗೊಂಡಿವೆ, ಬಂಟ್ವಾಳ: ಕಲ್ಕೂರ- 94, ಅಂಚನ್-27, ಹರೀಶ್- 13, ಪುತ್ತೂರು: ಕಲ್ಕೂರ- 68, ಅಂಚನ್- 34, ಹರೀಶ್-5, ಸುಳ್ಯ: ಕಲ್ಕೂರ- 12, ಅಂಚನ್- 8, ಹರೀಶ್- ११८, ಬೆಳ್ತಂಗಡಿ: ಕಲ್ಕೂರ- 98, ಅಂಚನ್- 17, ಹರೀಶ್- 7 . 1 ಮತ ತಿರಸ್ಕೃತಗೊಂಡಿದೆ.
Click this button or press Ctrl+G to toggle between Kannada and English