ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ: ಪ್ರೊ. ಪ್ರೀತಿ ಕೀರ್ತಿ ಡಿಸೋಜ

8:31 PM, Thursday, March 28th, 2019
Share
1 Star2 Stars3 Stars4 Stars5 Stars
(No Ratings Yet)
Loading...

Alvas ಮೂಡಬಿದಿರೆ: ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ. ವಿದ್ಯಾರ್ಥಿ ಜೀವನದಿಂದಲೇ ಮುಂದಿನ ಭವಿಷ್ಯದ ಯೋಜನೆಯೊಂದಿಗೆ ಹೆಜ್ಜೆ ಹಾಕಿದರೆ ಪ್ರತಿಯೊಬ್ಬರು ಕೂಡ ಗುರಿಯನ್ನು ಸಾಧಿಸಬಹುದು ಎಂದು ರಾಯಲ್ ವಿಶ್ವವಿದ್ಯಾಲಯದ ಪ್ರೊ. ಪ್ರೀತಿ ಕೀರ್ತಿ ಡಿಸೋಜ ತಿಳಿಸಿದರು.

ಆಳ್ವಾಸ್ ಕಾಲೇಜಿನ ಮ್ಯಾನೆಂಜ್‌ಮೆಂಟ್ ಮತ್ತು ಹೆಚ್‌ಆರ್‌ಡಿ ವಿಭಾಗದ ವತಿಯಿಂದ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಭೇತಿಯಲ್ಲಿ ಮಾತನಾಡಿದ ಅವರು ಕೇವಲ ಗುರಿ ಇದ್ದರೆ ಸಲಾದು ಸರಿಯಾದ ಯೋಜನೆಯು ಮುಖ್ಯ. ಸ್ಪಷ್ಟ ಗುರಿಯೊಂದಿಗೆ ಪರಿಶ್ರಮವು ಮೇಳೈಸಿದರೆ ಗುರಿಯನ್ನು ಸುಲಭವಾಗಿ ತಲಪಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಇತರರ ಸಂಸ್ಕೃತಿ ಅವರ ವ್ಯಕ್ತಿತ್ವವನ್ನು ಗೌರವಿಸಬೇಕು. ನಮ್ಮ ನಡವಳಿಕೆ ಮುಂದಿನ ಪೀಳಿಗೆಗೆ ಮಾದರಿಯಾಗಿದಬೇಕು. ಪ್ರತಿಯೊಬ್ಬರು ದ್ವೇಷ ಸಾಧಿಸುತ್ತಾ ಇದ್ದರೆ ನೆಮ್ಮದಿಯ ಬದುಕು ಹಾಳಗುತ್ತದೆ. ನಮಗೆ ಜೀವನವನ್ನು ಪುನಃ ಆರಂಭಿಸಲು ಸಾಧ್ಯವಿಲ್ಲವಾದರೂ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಲು ಇದರಿಂದ ಸಾದ್ಯ. ಆದ್ದರಿಂದ ಇಂದಿನಂದಲೇ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಭಾಗದ ಡೀನ್ ಪ್ರೋ. ಸುರೇಖಾ ಮಾತನಾಡಿ ವಿದ್ಯಾರ್ಥಿಗಳು ಕಲಿಕೆ ಪಠ್ಯಕ್ಕೆ ಮಾತ್ರ ಸಿಮೀತವಾಗಿರದೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳು ಭವಿಷ್ಯದಲ್ಲೂ ಉಪಯುಕ್ತವಾಗುತ್ತವೆ ಎಂದು ಹೇಳಿದರು.

ಕಾರ್ಯಗಾರದಲ್ಲಿ ವಿಭಾಗದ ವಾರ್ಷಿಕ ನ್ಯೂಸ್ ಬುಲೇಟಿನ್ ಎಂಬ ನಿಯತಕಾಲಿಕಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಹಲವು ಚಟುವಟಿಕೆಗಳನ್ನು ಮಾಡಿಸಿಲಾಯಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಪಕರಾದ ಚೈತ್ರ ರಾವ್, ಮಹಿಮಾ ರೈ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಬಿಬಿಎ ವಿದ್ಯಾರ್ಥಿ ಕೇರೆಲೂ ಸ್ವಾಗತಿಸಿ ರಾಹುಲ್ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English