ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ವಿಜಯಾ ಬ್ಯಾಂಕ್ – ಬ್ಯಾಂಕ್ ಆಫ಼್ ಬರೋಡಾ ಜೊತೆ ವಿಲೀನದ ವಿರುದ್ಧವಾಗಿ ಹಾಗೂ ಈ ವಿಲೀನವನ್ನು ವಿರೋದಿಸುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಸಮರ್ಪಕತೆಯನ್ನು ಖಂಡಿಸಿ “ಕರಾಳ ದಿನ” ಆಚರಿಸಲಾಯಿತು.
ಈ ಸಂರ್ಭದಲ್ಲಿ ಮಾತನಾಡಿದ ಮಿಥುನ್ ರೈ ವಿಜಯಾ ಬ್ಯಾಂಕ್ ಕರಾವಳಿಯ ಹೆಮ್ಮೆಯ ಬ್ಯಾಂಕ್ , ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಬ್ಯಾಂಕ್ , ಗುಜರಾತ್ ಮೂಲದ ಬ್ಯಾಂಕ್ ಆಫ಼್ ಬರೋಡಾದೊಂದಿಗೆ ವಿಲೀನ ಮಾಡುವ ಸಂಧರ್ಭದಲ್ಲಿ ನಮ್ಮ ಜಿಲ್ಲೆಯ ಸಂಸದರು ಸಂಸತ್ತಿನಲ್ಲಿ ಯಾವುದೆ ಮಾತನಾಡದಿರುವುದು ನಮ್ಮ ಜಿಲ್ಲೆಯ ದುರಂತ. ವಿಜಯ ಬ್ಯಾಂಕ್ ಇನ್ನಿಲ್ಲದಂತೆ ಮಾಡಿದ ನಳಿನ್ ಕುಮಾರ್‌ರನ್ನು ಜಿಲ್ಲೆಯ ಜನತೆ ಕ್ಷಮಿಸಲಾರರು ಎಂದರು.
ಮಲ್ಲಿಕಟ್ಟೆ ವಿಜಯಾ ಬ್ಯಾಂಕ್ ಬ್ರಾಂಚ್ ಬಳಿ ನಡೆದ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾದ ಮಿಥುನ್ ರೈ , ಮಾಜೀ ಶಾಸಕರಾದ ರಮಾನಾಥ ರೈ , ಜೆ ಆರ್ ಲೋಬೊ, ಪಕ್ಷದ ಮುಖಂಡರು ಹಾಜರಿದ್ದರು. .
Click this button or press Ctrl+G to toggle between Kannada and English