ಸುಳ್ಯ: ಯುಪಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಣವ್ ಮುಖರ್ಜಿ, ಚಿದಂಬರಂ ಅವರು ವಿಜಯ ಬ್ಯಾಂಕ್ ವಿಲೀನಕ್ಕೆ ಮುನ್ನುಡಿ ಬರೆದವರು. ಹಣಕಾಸು ಸಮಿತಿ ಅಧ್ಯಕ್ಷರಾಗಿದ್ದ ವೀರಪ್ಪ ಮೊಯ್ಲಿ ಅವರು ಇದಕ್ಕೆ ಒಪ್ಪಿಗೆ ನೀಡಿದವರು. ಆ ಅವಧಿಯಲ್ಲಿ ಜಿಲ್ಲೆಯ ಕಾಂಗ್ರೆಸಿಗರಿಗೆ ವಿಚಾರ ತಿಳಿದಿದ್ದರೂ ಯಾಕೆ ತಡೆದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಹಿಂದಿನ ಸರಕಾರ ಪಾಸ್ ಮಾಡಿದ ಬಿಲ್ ಅನ್ನು ಬಳಿಕದ ಸರಕಾರ ಬದಲಾಯಿಸಲಾಗದು. ಇದರಲ್ಲಿ ಎನ್‌ಡಿಎ ಸರಕಾರದ ಪಾತ್ರವಿಲ್ಲ ಎಂದರು.
ಬ್ಯಾಂಕ್ ವಿಲೀನ ಪ್ರಕ್ರಿಯೆ ಅಂತಾ ರಾಷ್ಟ್ರೀಯ ಒಪ್ಪಂದವಾಗಿರುವ ಕಾರಣ ಬದಲಾಯಿಸುವುದು ಕಷ್ಟ. ಬರೋಡಾ, ದೇನಾ ಬ್ಯಾಂಕ್ ಹೆಸರಿನ ಜತೆಗೆ ವಿಜಯ ಬ್ಯಾಂಕ್ ಹೆಸರು ಕೂಡ ಇರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ. ಕೇಳಿದ್ದೇವೆ ಅದಕ್ಕೆ ಸಕರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ನಳಿನ್ ಹೇಳಿದರು.
ಹಿಂದುತ್ವದ ರಕ್ಷಣೆಗೆ ನಳಿನ್‌ಗಿಂತ ಮಿಥುನ್ ರೈ ಅವರ ಉತ್ತಮ ಎಂದು ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಉತ್ತರಿಸಿದ ಸಂಜೀವ ಮಠಂದೂರು, ಸೋಲಿನ ಭೀತಿಯಿಂದ ಕಾಂಗ್ರೆಸ್ ಇಂತಹ ನಕಲಿ ಸಂದೇಶ ಸೃಷ್ಟಿ ಮಾಡಿದೆ. ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಕ್ಷ ಮುಂದಾಗಲಿದೆ ಎಂದರು.
Click this button or press Ctrl+G to toggle between Kannada and English