ಮಂಡ್ಯದ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಹೋರಾಡಲು ಸಿದ್ದನಿದ್ದೇನೆ : ಸುಮಲತಾ ಅಂಬರೀಶ್

3:37 PM, Thursday, April 4th, 2019
Share
1 Star2 Stars3 Stars4 Stars5 Stars
(No Ratings Yet)
Loading...

sumalatha
ಬೆಂಗಳೂರು: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ ಅವರು ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಸುದೀರ್ಘ‌ ಸುದ್ದಿಗೋಷ್ಠಿಯಲ್ಲಿ ನಡೆಸಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.

ಜನರ ಅಭಿಪ್ರಾಯದಂತೆ ರಾಜಕೀಯ ಪ್ರವೇಶಿಸಿದ್ದೇನೆ . ರಾಜಕೀಯ ಪ್ರವೇಶ ಮಾಡಿ ತಾಳ್ಮೆ ಕಲಿತಿಲ್ಲ. ತಾಳ್ಮೆ ಅನ್ನುವುದು ನನ್ನ ಹುಟ್ಟುಗುಣ, ಅಂಬರೀಶ್‌ ಅವರನ್ನು ಮದುವೆಯಾಗಿ 27 ವರ್ಷ ಸಂಸಾರ ನಡೆಸಿದ್ದೇನೆ ಇದಕ್ಕೆ ನನ್ನ ತಾಳ್ಮೆಯೆ ಕಾರಣ ಎಂದು ಜೆಡಿಎಸ್‌ ನಾಯಕರಿಗೆ ತಿರುಗೇಟು ನೀಡಿದರು.

ಮೂವರು ಸುಮಲತಾರಿಂದ ಜೆಡಿಎಸ್‌ಗೆ ಮತಗಳು ಬೀಳುವುದಿಲ್ಲ. ಇನ್ನೊಂದು ಸುಮಲತಾಗೆ ಮಾತ್ರ ವೋಟು ಬೀಳುತ್ತದೆ ಎಂದರು.

ನಾನು ಮೊದಲು ಸುಮಲತಾ ಆಗಿದ್ದೆ. ಮದುವೆ ಆದ ಮೇಲೆ ಸುಮಲತಾ ಅಂಬರೀಶ್‌ ಆದೆ ಎಂದರು.

ಅಂಬರೀಶ್‌ ಅವರು ಎಂದೂ ಅವಕಾಶವಾದಿ ರಾಜಕಾರಣಿ ಆಗಿರಲಿಲ್ಲ ಎಂದರು.ನಾನು ಗೆದ್ದ ಬಳಿಕ ಅನುದಾನದ ಬಗ್ಗೆ ಉತ್ತರಿಸುತ್ತೇನೆ. ಅಂಬರೀಶ್‌ ಅವರು ಎಂದೂ ತಮ್ಮ ಕೆಲಸದ ಬಗ್ಗೆ ಹೇಳಿಕೊಂಡಿರಲಿಲ್ಲ. ನಮ್ಮ ಒಳ್ಳೆಯ ಕೆಲಸಗಳೇ ನಮ್ಮ ಬಗ್ಗೆ ಹೇಳಬೇಕು ಅನ್ನುತ್ತಿದ್ದರು ಎಂದರು.

ಅಂಬರೀಶ್‌ ಬಗ್ಗೆ ಗೌರವದಿಂದ ಬೆಂಬಲ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿರುವುದಾಗಿ ತಿಳಿಸಿದರು.

ಅಂಬರೀಶ್‌ ಅವರು ಅಜಾತ  ಶತ್ರು ಗಿದ್ದರು. ಅವರ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಆದರೆ ನನಗೆ ನೋವು ಕೊಡುವ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬೇಸರ  ವ್ಯಕ್ತಪಡಿಸಿದರು.

ನಾನು ಮಂಡ್ಯದ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಹೋರಾಡಲು ಸಿದ್ದನಿದ್ದೇನೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English