ನಾವು ನಿಜವಾದ ಹಿಂದೂ ಧರ್ಮದ ಸಿದ್ದಾಂತ ನಂಬಿ ಬದುಕುತ್ತಿರುವವರು : ಮಿಥುನ್‌ ರೈ

7:09 PM, Tuesday, April 9th, 2019
Share
1 Star2 Stars3 Stars4 Stars5 Stars
(No Ratings Yet)
Loading...

Mithun Rai ಬೆಳ್ತಂಗಡಿ :  ನಿಜವಾದ ಹಿಂದೂ ಧರ್ಮದ ಸಿದ್ದಾಂತ ಎಂದರೆ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಸುವುದು.  ನಾವು  ಹಿಂದೂ ಸಿದ್ದಾಂತವನ್ನು ನಂಬಿ ಬದುಕುತ್ತಿರುವವರು ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಹೇಳಿದರು.

ಮಿಥುನ್ ರೈ ಮುಂದೆ ಇರುವ ರಾಜಕೀಯ ಸಿದ್ಧಾಂತ ಸ್ಪಷ್ಟವಾಗಿದೆ. ಈ ಸಿದ್ಧಾಂತದಲ್ಲಿ ಸಮಪಾಲು ಸಹಬಾಳು ಎನ್ನುವ ನೀತಿ ಇದೆ. ಮಾತ್ರವಲ್ಲದೆ ಎಲ್ಲಾ ಜಾತಿ ಬಾಂಧವರನ್ನು ಗೌರವಿಸಿ ಜತೆಯಾಗಿ ಮುನ್ನಡೆಯುವುದೇ ನೈಜ ಹಿಂದೂ ಧರ್ಮ. ಬದಲಾಗಿ ಜಾತಿ -ಧರ್ಮಗಳ ನಡುವೆ ವಿಷ ಬೀಜ ಬೆಳೆಸಿ ರಾಜಕೀಯ ನಡೆಸುವುದಲ್ಲ ಎಂದರು.

Mithun Rai ಆ ಬಳಿಕ ಮಾಜಿ ಶಾಸಕ ವಸಂತ ಬಂಗೇರ ಮನೆಗೆ, ಸೋಮನಾಥೇಶ್ವರ ದೇವಸ್ಥಾನ, ಹೋಲಿ ರೆಡಿಮೆರ್‌ ಚರ್ಚ್‌, ಜುಮಾ ಮಸೀದಿಗೆ ಭೇಟಿ ನೀಡಿದರು. ಕನ್ಯಾಡಿ ರಾಮಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ಆಶೀರ್ವಾದ ಪಡೆದರು. ಮಧ್ಯಾಹ್ನ ಕೊಕ್ಕಡ ಸಾರ್ವಜನಿಕ ಸಭೆಗೂ ಮುನ್ನ ಸೌತಡ್ಕದ ಮಹಾಗಣಪತಿ ದೇವರ ದರ್ಶನ ಪಡೆದರು.

ಕಳಿಯ- ಗೇರುಕಟ್ಟೆ, ಮಡಂತ್ಯಾರಲ್ಲಿ ಸಾರ್ವಜನಿಕ ಸಭೆ, ಸಂಜೆ ಇಂದಬೆಟ್ಟು, ಕಕ್ಕಿಂಜೆ, ಲಾಯಿಲ ಗ್ರಾಮದ ಕುಂಟಿನಿಯಲ್ಲಿ ಸಭೆ ನಡೆಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಾಸಕ ಹರೀಶ್‌ ಕುಮಾರ್‌, ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ ಇದ್ದರು.

Mithun Rai

Mithun Rai

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English