ಬಂಟ್ವಾಳ ಇಂದು ಹಸೆಮಣೆ ಏರುವ ಹೊಸ ಜೋಡಿಗಳಿಂದ ಮತದಾನ

12:04 PM, Thursday, April 18th, 2019
Share
1 Star2 Stars3 Stars4 Stars5 Stars
(No Ratings Yet)
Loading...

Mundadiಬಂಟ್ವಾಳ  : ಬಂಟ್ವಾಳದಲ್ಲಿ ಬೆಳಿಗ್ಗೆ 11 ರ ವೇಳೆಗೆ 33.89 ಶೇಕಡಾ ಮತದಾನವಾಗಿದ್ದು, ಮತದಾರರು ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ.  ಇಂದು ಮದುವೆಯಾಗುವ ನವಜೋಡಿ ಬೆಳಗ್ಗೆ ಓಟ್ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸುಭಾಸ್ ನಗರದ ಬೇಂಕೆ ನಿವಾಸಿ ಅಶೋಕ್ ಪುಷ್ಪಲತಾ ಅವರ ಪುತ್ರಿ ಪ್ರತಿಜ್ಞಾ ಅವರು ಬೇಂಕ್ಯೆ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಚಲಾಯಿಸಿದ್ದಾರೆ.

Sumithಅದಲ್ಲದೆ, ಮದುಮಗ ಸುಮಿತ್ ಪೂಜಾರಿ ಅವರು ತನ್ನ ಬಾವಿ ಪತ್ನಿ ಪ್ರತಿಜ್ಞಾ ಅವರ ಜೊತೆ ಪೊಳಲಿ ಸರಕಾರಿ ಶಾಲೆಯ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.

ಬಂಟ್ವಾಳ ನಿತ್ಯಾನಂದ ನಗರ ನಿವಾಸಿ ರಮ್ಯಾ ಶೆಟ್ಟಿ ಅವರು ದಿಬ್ಬಣ ಹೊರಡುವ ಮೊದಲು ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು.

ಬಂಟ್ವಾಳದಲ್ಲಿ ಮಾಜಿ ಶಾಸಕ ರಮಾನಾಥ ರೈ , ಹಾಲಿ ಶಾಸಕ ರಾಜೇಶ್ ನಾಯ್ಕ್ , ಎಸ್ ಡಿ ಪಿ ಐ  ಅಭ್ಯರ್ಥಿ  ಮಹಮ್ಮದ್ ಇಲಿಯಾಸ್ ತುಂಬೆ ಮತ ಚಲಾಯಿಸಿದರು.

RamanathaRai

RajeshNaik

Iliyas

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English