ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಮತ ಚಲಾಯಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸಾಮರಸ್ಯದ ಪರಂಪರೆಯ ಉಳಿವಿಗೆ ಮತದಾರರು ಬೆಂಬಲಿಸುತ್ತಾರೆಂಬ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಕೇಸರಿ ಎಂಬುದು ತ್ಯಾಗ, ಸೌಹಾರ್ದತೆಯ ಸಂಕೇತ. ದುರದೃಷ್ಟವೆಂದರೆ ಕೆಲ ದಿನಗಳಿಂದ ಕೇಸರಿ ಅಂದರೆ ಭೀತಿಯನ್ನು ಹುಟ್ಟಿಸುವ ಕೆಲಸ ನಡೆಯುತ್ತಿದೆ. ಈ ತಪ್ಪು ಅಭಿಪ್ರಾಯ ನಿವಾರಣೆಗೆ ಕೇಸರಿ ಶಾಲು ನಿರಂತರ ಬಳಸುತ್ತಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.
Click this button or press Ctrl+G to toggle between Kannada and English