ಪ್ರತಿ ಮನೆಗೂ ನೀರಿನ ಮೀಟರ್‌ ಕಡ್ಡಾಯಗೊಳಿಸಿ : ಎ.ಜಿ. ಕೊಡ್ಗಿ

6:49 PM, Wednesday, May 9th, 2012
Share
1 Star2 Stars3 Stars4 Stars5 Stars
(3 rating, 4 votes)
Loading...

Ag Kodgi Mcc

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೂರನೇ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನಗಳ ಪರಿಶೀಲನಾ ಸಭೆಯು ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಆಯೋಗದ ಅಧ್ಯಕ್ಷ ಎ.ಜಿ. ಕೊಡ್ಗಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಕುಡಿಯಲು ಉಪಯೋಗಿಸಬೇಕಾದ ನೀರನ್ನು ಶ್ರೀಮಂತರು ಕೃಷಿ ಮತ್ತಿತರ ಉದ್ದೇಶಗಳಿಗೂ ಬಳಸುತ್ತಿರುವುದು ಕಂಡುಬರುತ್ತಿದೆ. ನೀರಿನ ದುರುಪಯೋಗ ತಡೆದು ಎಲ್ಲರಿಗೂ ಮೀಟರ್‌ ಕಡ್ಡಾಯಗೊಳಿಸಲು ಪಾಲಿಕೆ ಕಠಿನ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಹಲವೆಡೆ ಬಡವರ ಹೆಸರಿನಲ್ಲಿ ಕುಡಿಯುವ ನೀರಿನ ಅಪವ್ಯಯವಾಗುತ್ತಿದೆ ಎಂದು ಎ.ಜಿ. ಕೊಡ್ಗಿ ಸೂಚನೆ ನೀಡಿದ್ದಾರೆ.

Ag Kodgi Mcc

ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಸರಿದೂಗಿಸಲು ವಿತರಣೆ ವ್ಯವಸ್ಥೆಯಲ್ಲಿ ಆಗಿರುವ ಲೋಪವನ್ನು ಸರಿದೂಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಕಟ್ಟಡಗಳನ್ನು ಮುಂದಿನ ಒಂದು ತಿಂಗಳ ಒಳಗೆ ಪತ್ತೆಹಚ್ಚಿ ತೆರಿಗೆ ವ್ಯಾಪ್ತಿಗೆ ತರುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿನೆ ನೀಡಿದರು. ಅನಧಿಕೃತ ಕಟ್ಟಡಗಳ ಕುರಿತು ಅಧಿಕಾರಿಗಳು ಸರಿಯಾಗಿ ನೀಡಿದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 6 ತಿಂಗಳಾಗಿದ್ದು, ಇಲ್ಲಿವರೆಗೆ ಉತ್ತರ ಬಂದಿಲ್ಲ ಎಂದು ಪಾಲಿಕೆ ಆಯುಕ್ತ ಡಾ| ಹರೀಶ್‌ ಕುಮಾರ್‌ ತಿಳಿಸಿದರು.

ಆಯೋಗದ ಸದಸ್ಯ ಕಾರ್ಯದರ್ಶಿ ರಾಮಚಂದ್ರ, ಸದಸ್ಯರಾದ ಮಹೇಂದ್ರ ಕಂಠಿ, ತಿಮ್ಮೇಗೌಡ, ಮೇಯರ್‌ ಗುಲ್ಜಾರ್‌ಭಾನು, ಉಪ ಮೇಯರ್‌ ಅಮಿತಕಲಾ, ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪ ಗೌಡ ಅವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English