ಸದಸ್ಯರ ಆರ್ಥಿಕ ಸಾಕ್ಷರತೆಯು ಸಹಕಾರ ಸಂಸ್ಥೆಗಳ ಗುರಿ – ಹರೀಶ್‌ಆಚಾರ್

8:30 PM, Tuesday, May 14th, 2019
Share
1 Star2 Stars3 Stars4 Stars5 Stars
(No Ratings Yet)
Loading...

Vishwa Karmabankಮಂಗಳೂರು  : ಸಹಕಾರಿ ಸಂಸ್ಥೆಗಳು ಕೇವಲ ಲಾಭಗಳಿಸುವ ಉದ್ದೇಶದಿಂದ ಕೆಲಸ ಮಾಡುವುದಲ್ಲ. ಸಹಕಾರಿ ಸಂಸ್ಥೆಗಳಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ಸದಸ್ಯರ ಅಗತ್ಯತೆಗೆ ತಕ್ಕಂತೆ ಸಮುದಾಯ ಅಭಿವೃದ್ಧಿಯ ರಚನಾತ್ಮಕ ಕಾರ್ಯಕ್ರಮಗಳನ್ನು ಯೋಜಿಸಬೇಕು. ಸದಸ್ಯರಲ್ಲಿ ಆರ್ಥಿಕ ಶಿಸ್ತು ಮತ್ತು ಯೋಜನೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡಬೇಕಾಗಿದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಹರೀಶ್‌ಆಚಾರ್ ಹೇಳಿದರು.

ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ೪೩ನೇ ಸ್ಥಾಪನಾ ದಿನಾಚರಣೆಯಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸೌತ್ ಕೆನರಾಗೋಲ್ಡ್ ಸ್ಮಿತ್ ಇಂಡಸ್ಟ್ರೀಸ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬೈಕಾಡಿ ಜನಾರ್ದನ ಆಚಾರ್‌ಇವರು ಸಹಕಾರಿ ಸಂಸ್ಥೆಗಳು ಪರಸ್ಪರ ಸಹಕಾರ ಮನೋಭಾವನೆಯಿಂದಕೆಲಸ ಮಾಡಬೇಕು.ಸಹಕಾರಿ ಸಂಸ್ಥೆಗಳ ಮಧ್ಯೆ ಆರೋಗ್ಯಕರ ಪೈಪೋಟಿಉತ್ತಮ. ಇದರಿಂದ ಸದಸ್ಯರಿಗೆ ಮೌಲ್ಯವರ್ದಿತ ಸೇವೆ ಸಿಗುವುದು ಮಾತ್ರವಲ್ಲದೇ ಸಂಸ್ಥೆಯಅಭಿವೃದ್ಧಿದರವು ಹೆಚ್ಚುತ್ತದೆಎಂದು ಹೇಳಿದರು.

ಈ ಸಂದರ್ಭದಲ್ಲಿಸೌತ್‌ಕೆನರಾಗೋಲ್ಡ್ ಸ್ಮಿತ್ ಇಂಡಸ್ಟ್ರೀಸ್ ಕೋ-ಓಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಬೈಕಾಡಿಜನಾರ್ದನಆಚಾರ್, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಎ. ಆನಂದಆಚಾರ್ಯ ಹಾಗೂ ನೂತನವಾಗಿಆಯ್ಕೆಯಾಗಿರುವಎಲ್ಲಾ ನಿರ್ದೇಶಕರನ್ನು ಅಭಿನಂದಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್‌ನಉಪಾಧ್ಯಕ್ಷರಾದ ಶ್ರೀ ಡಿ. ಭಾಸ್ಕರಆಚಾರ್ಯ, ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುರೇಶ್‌ಕುಮಾರ್ ಬಿ. ಹಾಗೂ ಎಸ್.ಕೆ.ಜಿ.ಐ.ಕೋ-ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದಶ್ರೀ ಎ. ಆನಂದಆಚಾರ್ಯ,ಹಾಗೂ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರಇವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English