ಮಂಗಳೂರು : ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಶ್ರೀಮತಿ ಶೆಟ್ಟಿಯವರನ್ನು ಬರ್ಬರವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ನಗರದ ಕದ್ರಿ ಪಾರ್ಕ್, ನಂತೂರ್, ನಂದಿಗುಡ್ಡೆ ಸೇರಿದಂತೆ ವಿವಿಧೆಡೆಗಳಲ್ಲಿ ಎಸೆದು ಹೋಗಿದ್ದ ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು.
ಇದೀಗ ಈ ಕೊಲೆಯಲ್ಲಿ ದಂಪತಿಗಳಿಬ್ಬರು ಭಾಗಿಯಾಗಿದ್ದು, ಬಂಧಿತರನ್ನು ವೆಲೆನ್ಸಿಯಾ ಸೂಟರ್ ಪೇಟೆಯ ಜೋನಸ್ ಜೂಲಿನ್ ಸ್ಯಾಮ್ಸನ್ (36) ಹಾಗೂ ಆತನ ಪತ್ನಿ ಶ್ರೀಮತಿ ವಿಕ್ಟೋರಿಯಾ ಮಥಾಯಿಸ್ (46) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಅಯುಕ್ತ ಸಂದೀಪ್ ಪಾಟೀಲ್ ಅವರು. ಶ್ರೀಮತಿ ಶೆಟ್ಟಿಯಿಂದ ಜೋನಸ್ ಜೂಲಿನ್ ಸಾಲದ ರೂಪದಲ್ಲಿ ಹಣ ಪಡೆದಿದ್ದು, ಸ್ವಲ್ಪ ಬಾಕಿ ತೀರಿಸಿದ್ದರು . ಬಾಕಿ ಉಳಿದ ಹಣವನ್ನು ಶ್ರೀಮತಿ ಶೆಟ್ಟಿ ನೀಡುವಂತೆ ಹಲವಾರು ಬಾರಿ ವಿನಂತಿಸಿದ್ದರು ಹಣ ನೀಡಿದರಲಿಲ್ಲ.
ಮೇ. 11 ರಂದು ಹಣ ವಾಪಾಸು ಪಡೆಯುವ ದೃಷ್ಟಿಯಿಂದ ಜೋನಸ್ ಜೂಲಿನ್ ಮನೆಗೆ ತೆರಳಿದ್ದು, ಆಗ ಶ್ರೀಮತಿ ಶೆಟ್ಟಿಯವರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆ ನಡೆಸಿದ್ದಾನೆ. ಈ ಸಂದರ್ಭ ಆರೋಪಿಯ ಪತ್ನಿಯೂ ಸಹಕಾರ ನೀಡಿರುವುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಹಣಕಾಸು ವ್ಯವಹಾರದ ವೈಷಮ್ಯದಿಂದ ಕೊಲೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಹೋದ ವೇಳೆ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪತ್ನಿ ಕೊಲೆಗೆ ಸಹಕಾರ ನೀಡಿರುವ ಆರೋಪವಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಶೆಟ್ಟಿಯವರ 8 ಚಿನ್ನದ ಉಂಗುರ ಹಾಗೂ 1 ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಯುಕ್ತರು ತಿಳಿಸಿದ್ದಾರೆ.
ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಲಾಗಿದ್ದು, ತನಿಖೆಗೆ ಮೂರು ತಂಡಗಳನ್ನು (ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಸಿಸಿಬಿ ಪೊಲೀಸರ ತಂಡ ಮತ್ತು ಮಂಗಳೂರು ನಗರ ಕೇಂದ್ರೀಯ ಎಸಿಪಿ ನೇತೃತ್ವದ ತಂಡ) ರಚಿಸಲಾಗಿತ್ತ್ತು.ಮೂರೂ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಪ್ರಕರಣದ ಹಿಂದೆ
ಆರೋಪಿ ಜೋನಸ್ ನಂದಿಗುಡ್ಡೆಯ ಬಳಿ ಫಾಸ್ಟ್ ಪುಢ್ ಅಂಗಡಿ ವ್ಯಾಪಾರ ನಡೆಸುತ್ತಿದ್ದ. ಆದರೆ ಫಾಸ್ಟ್ ಪುಢ್ ವ್ಯಾಪಾರದಲ್ಲಿ ಕೈಸುಟ್ಟುಕೊಂಡಿದ್ದ ಆತ ಕಳೆದ ಒಂದು ತಿಂಗಳಿನಿಂದ ಅಂಗಡಿಯನ್ನು ಮುಚ್ಚಿದ್ದ. ಈ ನಡುವೆ ಶ್ರೀಮತಿ ಶೆಟ್ಟಿ ಅವರಿಂದ 1ಲಕ್ಷ ಸಾಲ ಪಡೆದಿದ್ದ. ಆದರೆ 40 ಸಾವಿರ ಹಣವನ್ನು ಹಿಂತಿರುಗಿಸಿದ್ದ ಆತ ಉಳಿದ 60 ಸಾವಿರ ಹಣವನ್ನು ವಾಪಾಸ್ ನೀಡದೆ ಬಾಕಿ ಉಳಿಸಿಕೊಂಡಿದ್ದ.
ಮೇ. 11ರಂದು ಶನಿವಾರ ಶ್ರೀಮತಿ ಶೆಟ್ಟಿ ಬಾಕಿ ಉಳಿದ ಹಣವನ್ನು ವಾಪಾಸ್ ಕೇಳಲೆಂದು ಜೋನಸ್ ಮನೆಗೆ ತೆರಳಿದ್ದರು. ಆದರೆ, ಹಣ ಹಿಂದಿರುಗಿಸಲು ಆಗದ ಜೋನಸ್, ಕುಪಿತಗೊಂಡು ಶ್ರೀಮತಿ ಶೆಟ್ಟಿಯನ್ನು ತನ್ನ ಮನೆಯಲ್ಲಿಯೇ ಹೊಡೆದು ಕೊಲೆ ಮಾಡಿದ್ದ.
ಆ ಬಳಿಕ ಶನಿವಾರ ದಿನಪೂರ್ತಿ ಶವದೊಂದಿಗೆ ಕಾಲ ಕಳೆದ ಆತ ರಾತ್ರಿ ಆಗುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿ ಶವವನ್ನು ಸಾಗಿಸಲು ಸುಲಭವಾಗುವಂತೆ ರುಂಡ ಮುಂಡ ಕಾಲಿನ ಭಾಗವನ್ನು ತುಂಡರಿಸಿ, ನಗರದ ಮೂರು ಕಡೆ ಮೃತದೇಹದ ಭಾಗಗಳಲ್ಲಿ ಎಸೆದಿದ್ದ. ಆ ಬಳಿಕ ಶ್ರೀಮತಿ ಶೆಟ್ಟಿಯ ದ್ವಿಚಕ್ರ ವಾಹನವನ್ನು ನಾಗುರಿಯ ಬಳಿ ಗ್ಯಾರೇಜ್ ನಲ್ಲಿ ಇರಿಸಿದ್ದ. ಆ ಬಳಿಕ ಕೃತ್ಯಕ್ಕೆ ಬಳಸಿದ ತನ್ನ ದ್ವಿಚಕ್ರ ವಾಹನವನ್ನು ತನ್ನ ಸ್ನೇಹಿತನ ಮನೆ ಬಳಿ ನಿಲ್ಲಿಸಿ ತನಗೇನೂ ತಿಳಿಯದಂತೆ ಸುಮ್ಮನಾಗಿದ್ದ.
ಕೃತ್ಯಕ್ಕೆ ಜೋನಸ್ ಬಳಸಿದ್ದ ದ್ವಿಚಕ್ರವಾಹನ ಹಾಗೂ ಕೊಲೆಯಾದ ಶ್ರೀಮತಿ ಶೆಟ್ಟಿ ಮೈಮೇಲಿದ್ದ ಚಿನ್ನದ ಸರ ಹಾಗೂ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ .
Click this button or press Ctrl+G to toggle between Kannada and English