ಮಗಳೊಂದಿಗೆ ಶಬರಿಮಲೆ ಯಾತ್ರೆಗೆ ತೆರಳಿದ್ದ ವೀರಮಂಗಲದ ನಿವಾಸಿ ಸಾವು

8:10 PM, Friday, May 17th, 2019
Share
1 Star2 Stars3 Stars4 Stars5 Stars
(No Ratings Yet)
Loading...

Janardhana Gowdaಪುತ್ತೂರು :  ಶಬರಿಮಲೆ ಯಾತ್ರೆಗೆ ತೆರಳಿದ್ದ ಪುತ್ತೂರಿನ ಯುವ ಉದ್ಯಮಿಯೊಬ್ಬರು ಅಯ್ಯಪ್ಪ ಸನ್ನಿಧಾನದ ಸಮೀಪ ಹೃದಯಾಘಾತದಿಂದ ಮೇ 16 ರ ಗುರುವಾರ ಮೃತಪಟ್ಟಿದ್ದಾರೆ. ಮೃತರನ್ನು ಪುತ್ತೂರು ಹೊರ ವಲಯದ ನರಿಮೊಗರು ಎಂಬಲ್ಲಿನ ವೀರಮಂಗಲದ ಗುತ್ತು ನಿವಾಸಿ ಜನಾರ್ದನ ಗೌಡ (36) ಎಂದು ಗುರುತಿಸಲಾಗಿದೆ.

ವಿಪರ್ಯಾಸ ಎಂದರೆ ಮೇ 16ರಂದು ಇವರ ವಿವಾಹ ವಾರ್ಷಿಕೋತ್ಸವ ದಿನವೂ ಆಗಿತ್ತು.

ಮೇ 15ರಂದು ಅವರು ತಮ್ಮ ಪುತ್ರಿ ಭಾವ ಹಾಗೂ ಮತ್ತಿಬ್ಬರ ಜತೆ ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆದು ಮಂಗಳೂರಿಗೆ ತಂಡದ ಜತೆ ತೆರಳಿ ಅಲ್ಲಿಂದ ರೈಲಿನ ಮೂಲಕ ಕೇರಳಕ್ಕೆ ತೆರಳಿದ್ದರು.

16ರಂದು ಮುಂಜಾನೆ ಇವರ ತಂಡ ಪಂಪಾ ನದಿ ಬಳಿ ತೆರಳಿ ಸ್ನಾನಾದಿ ಧಾರ್ಮಿಕ ವಿಧಿಗಳನ್ನು ಪೂರೈಸಿ ಸನ್ನಿಧಾನದತ್ತ ತೆರಳಿದ್ದರು. ಶಬರಿ ಪೀಠ ತಲುಪುತ್ತಿದ್ದಂತೆ ಜನಾರ್ದನ ಗೌಡರಿಗೆ ಎದೆನೋವು ಕಾಣಿಸಿಕೊಂಡಿತು. ಆಯಾಸಗೊಂಡಿದ್ದು ಕುಡಿಯಲು ನೀರು ಕೇಳಿದ್ದರು ಬಳಿಕ ವಾಂತಿ ಮಾಡಿಕೊಂಡು ಕುಸಿದುಬಿದ್ದರು. ತಕ್ಷಣ ಜತೆಗಿದ್ದವರು ಅವರನ್ನು ಹೊತ್ತುಕೊಂಡು, ಆಧರಿಸಿ ಪಂಪಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಅಸು‌ನೀಗಿದರು. ನಂತರ ಮೃತ ದೇಹವನ್ನು ಕೊಟ್ಟಾಯಂ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಪಾರ್ಥಿವ ಶರೀರವನ್ನು ಪುತ್ತೂರಿಗೆ ತರಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English