ಯಶಸ್ಸಿನ ಮೂಲ ಮಂತ್ರವೇ ಕಠಿಣ ಪರಿಶ್ರಮ – ಶ್ರಮ ಏವ ಜಯತೇ- ಡಾ. ಉಷಾಪ್ರಭಾಎನ್. ನಾಯಕ್

8:55 PM, Tuesday, May 21st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

expertಮಂಗಳೂರು  : ವಿದ್ಯಾರ್ಥಿಗಳು ಆಸಕ್ತಿಯಿಂದ ಹಾಗೂ ಕಠಿಣ ಪರಿಶ್ರಮದೊಂದಿಗೆದುಡಿದರೆಖಂಡಿತಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ.’ಯಶಸ್ಸಿನ ಮೂಲಮಂತ್ರಕಠಿಣ ಶ್ರಮ- ಶ್ರಮ ಏವ ಜಯತೇ’ ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಶೆ ಡಾ.ಉಷಾಪ್ರಭಾ ಎನ್. ನಾಯಕ್‌ರವರು ತಿಳಿಸಿದರು.

ಅವರು ಮಂಗಳೂರಿನ ಭಗವತಿ ಕ್ಷೇತ್ರದ ಕೂಟಕ್ಕಳ ಸಭಾಂಗಣದಲ್ಲಿ ನಡೆದ ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮತ್ತುಅವರ ಪೋಷಕರಿಗೆ ಆಯೋಜಿಸಿದ ಓರಿಯಂಟೇಶನ್ 2019ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪದವಿಪೂರ್ವ ಹಂತವು ವಿದ್ಯಾರ್ಥಿಗಳ ಪಾಲಿಗೆ ಅತೀ ಸಂತೋಷಕರ ಸಮಯ.ಈ ಸಮಯ ವ್ಯರ್ಥ ಮಾಡಿಕೊಳ್ಳದೆ ಸದುಪಯೋಗಿಸಿಕೊಳ್ಳಬೇಕು.ಮಕ್ಕಳ ಭವಿಷ್ಯವನ್ನು ರೂಪುಗೊಳಿಸುವಲ್ಲಿ ಪೋಷಕರ ಪಾತ್ರತುಂಬಾ ಮುಖ್ಯ.ವಿದ್ಯಾರ್ಥಿಯು ಶೈಕ್ಷಣಿಕ ಶ್ರೇಷ್ಟತೆಯನ್ನು ಪಡೆಯಲುಅವರ ಪರಿಶ್ರಮದೊಂದಿಗೆ, ಪೋಷಕರ ಪ್ರೋತ್ಸಾಹಕೂಡಅತೀ ಮುಖ್ಯ. ಹದಿಹರೆಯದ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮಜೀವನದ ಮೇಲೆ ಪರಿಣಾಮ ಬೀರುವ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಆದರೆನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದಲ್ಲಿನಡೆಯುವಂತೆ ಮಾಡುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು ಈ ಚಟಧೂಮಪಾನ ಮದ್ಯಪಾನಕ್ಕಿಂತಲೂ ಹಾನಿಕರವಾದದ್ದು. ಹಣದಿಂದಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಭೋಧಿಸಿದರು.

ಎಕ್ಸ್‌ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಶರಾಗಿರುವ ಪೊ.ನರೇಂದ್ರಎಲ್. ನಾಯಕ್‌ಅವರುಅಧ್ಯಕ್ಷತೆವಹಿಸಿ ಮಾತನಾಡಿವಿದ್ಯಾರ್ಥಿಯು ಸರಿಯಾದಗುರಿಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಮತ್ತುಗುರಿ ಸಾಧಿಸುವಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ಮುಟ್ಟಲು ಸಾಧ್ಯ.ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆಯುತಮ್ಮ ಜೀವನದ ಅಪೂರ್ಣತೆಗೆ ಕಾರಣವಾಗುತ್ತದೆ. ಯಾವುದೇರೀತಿಯ ಪರಿಶ್ರಮ ಪಡದೆದೇವರನ್ನು ಬೇಡಿದರೆದೇವರುಕೂಡ ಸಹಾಯ ಮಾಡುವುದಿಲ್ಲ. ಕಾಯಕವೇ ಕೈಲಾಸಎಂದು ತಿಳಿದು ಶ್ರಮ ಪಡಬೇಕು.ಕಲಿಕೆಯಲ್ಲಿ ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರಭಟ್‌ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಕಟ್ಟು ನಿಟ್ಟಾಗಿ ಅನುಸರಿಸಬೇಕಾದ ಕಾಲೇಜಿನ ನಿಯಮ ನಿಬಂಧನೆಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ದೀಪಿಕ ಎ. ನಾಯಕ್, ಯೋಗಗುರುಗಳಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,ವೇಳಾಪಟ್ಟಿ ಸಂಯೋಜಕರು ಪ್ರೊ.ಸುಬ್ರಹ್ಮಣ್ಯ ಉಡುಪ, ಎಐಸಿಇ ವಿಭಾಗದ ಸಂಯೋಜಕರಾದಪ್ರೊ.ಶ್ಯಾಮ್ ಪ್ರಸಾದ್, ಸಂಯೋಜಕರಾದ ಶ್ರೀ ಕರುಣಾಕರ ಬಳ್ಕೂರು, ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿಗಳಾದ ಭೌತಶಾಸ್ತ್ರ ವಿಭಾಗದಉಪನ್ಯಾಸಕರಾದ ಶ್ರೀ ಪ್ರಸನ್ನಕುಮಾರಆರ್ ಹಾಗೂ ಇಂಗ್ಲಿಷ್ ವಿಭಾಗದಉಪನ್ಯಾಸಕಿ ತೆರೆಸಾ ವಿಲ್ಮಾಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಶ್ವೇತಾಕುಮಾರಿ ಹಾಗೂ ಇನ್ನಿತರರುಉಪಸ್ಥಿತರಿದ್ದರು. ಉಪನ್ಯಾಸಕಿ ನೀಹಾ ಫ಼ಹೀಮ್‌ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English