ಯೋಗಾಭ್ಯಾಸದ ಮೂಲಕ ಉತ್ತಮ ಆರೋಗ್ಯ : ಉಮಾ ಪ್ರಶಾಂತ್

10:02 PM, Wednesday, May 22nd, 2019
Share
1 Star2 Stars3 Stars4 Stars5 Stars
(No Ratings Yet)
Loading...

yoga pressಮಂಗಳೂರು  : ಒತ್ತಡದ ಜೀವನದಲ್ಲಿ ಯೋಗಾಭ್ಯಾಸದ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ಭ್ರಷ್ಟಾಚಾರ ನಿಗ್ರಹದಳದ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಐಸಿರಿ ಹೆಲ್ದಿ ಇಂಡಿಯಾ ಮಿಷನ್ ಸಹಭಾಗಿತ್ವದಲ್ಲಿ ಪತ್ರಕರ್ತರಿಗೆ ಒಂದು ತಿಂಗಳ ಕಾಲ ನಡೆಯಲಿರುವ ಯೋಗ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಆರೋಗ್ಯದ ಕಡೆಗೆ ದಿನದಲ್ಲಿ 10-15 ನಿಮಿಷ ಮೀಸಲಿಡಬೇಕು. ಆರೋಗ್ಯವಿದ್ದರೆ ಮಾತ್ರ ನಾವು ಕೆಲಸ ಮಾಡಲು ಸಾಧ್ಯ. ಶಿಬಿರದ ಬಳಿಕವೂ ಪ್ರತಿದಿನ ಯೋಗಾಭ್ಯಾಸ ಮುಂದುವರಿಸಿಕೊಂಡು ಹೋಗಬೇಕು ಎಂದವರು ಹೇಳಿದರು.

ಐಸಿರಿ ಹೆಲ್ದಿ ಇಂಡಿಯಾ ಮಿಷನ್ ನಿರ್ದೇಶಕ ದರ್ಶನ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಈಗಾಗಲೇ ಪೆÇಲೀಸ್ ಸಿಬ್ಬಂದಿ, ಜೈಲ್‌ನಲ್ಲಿ, ಸಾರ್ವಜನಿಕರಿಗೆ ಶಿಬಿರಗಳನ್ನು ನಡೆಸಲಾಗಿದೆ. ಇದರಿಂದ ಸಮಾಜಮುಖಿಯಾಗಲು ಸಾಧ್ಯವಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಶ್ರೀನಿವಾಸ  ಇಂದಾಜೆ, ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ಮೋಟುಕಾನ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English