ಕಾಸರಗೋಡು ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಗೆಲುವು

7:53 PM, Thursday, May 23rd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Rajmohan Unnithanಕಾಸರಗೋಡು :  ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಮ್ಮ ಪ್ರತಿಸ್ಪರ್ಧಿ ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು40,438 ಮತಗಳ ಅಂತರದಿಂದ ಸೋಲಿಸಿದರು.

ಸಿಪಿಎಂನ ಭದ್ರ ಕೋಟೆಯಾದ ಕಾಸರಗೋಡು ಮೂರು ದಶಕದ ಬಳಿಕ ಕಾಸರಗೋಡು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಮ್ಮ ಪ್ರತಿಸ್ಪರ್ಧಿ ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿ ತ್ತಾನ್ ಸಿಪಿಎಂನ ಕೆ. ಪಿ ಸತೀಷ್ಚಂದ್ರನ್ ವಿರುದ್ಧ ಸುಮಾರು 41, 648 ಅಂತರದಿಂದ ಗೆಲುವು ಸಾದಿಸಿದರು.

ರಾಜ್ ಮೋಹನ್ ಉಣ್ಣಿತ್ತಾನ್ 4,74,961 ಸತೀಶ್ಚಂದ್ರನ್  4,34,523 ಮತಗಳನ್ನು ಪಡೆದರೆ, ಬಿಜೆಪಿಯ ರವೀಶ ತಂತ್ರಿ ಕುಂಟಾರು 1,76,049 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

Kasaragod

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English