ಶಕ್ತಿ ವಸತಿ ಶಾಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿಅಕ್ಷರಭ್ಯಾಸ

10:03 PM, Tuesday, May 28th, 2019
Share
1 Star2 Stars3 Stars4 Stars5 Stars
(No Ratings Yet)
Loading...

Shakti Schoolಮಂಗಳೂರು :  ಶಕ್ತಿ ವಸತಿ ಶಾಲೆಯಲ್ಲಿಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ಅಕ್ಷರಭ್ಯಾಸ ಮಾಡಲಾಯಿತು. ಶಾರದೆಯ ವಿಗ್ರಹದೆದುರು ಹರಿವಾಣದಲ್ಲಿಅಕ್ಕಿಯನ್ನು ಹಾಕಿ ಅದರ ಮೇಲೆ ಪೋಷಕರು ಮಕ್ಕಳಿಂದ ’ಓಂ’ ಬರೆಯಿಸಿ ಶಿಕ್ಷಣಕ್ಕೆ ಓಂಕಾರ ಹಾಡಿದರು.

ಶಾಲಾ ಪ್ರಾಚಾರ್ಯರಾದ ಶ್ರೀಮತಿ ವಿದ್ಯಾಕಾಮತ್ ಜಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಆನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪೋಷಕರಿಗೆ ಶಾಲೆ ಹಾಗೂ ಶಾಲೆಯಲ್ಲಿ ನಡೆಯಲಿರುವ ಪಠ್ಯ ಮತ್ತು ಪಠ್ಯೇತರಚಟುವಟಿಕೆಯ ಬಗ್ಗೆ ಶಾಲಾ ಪ್ರಾಯರ್ಯೆ ಮಾಹಿತಿ ನೀಡಿದರು. ಆರಂಭದಲ್ಲಿ ಶ್ರೀಮತಿ ಸ್ವಾತಿ ಭರತ್ ಸ್ವಾಗತ ಬಯಸಿ, ಕು. ದೀಪ್ತಿ ವಂದಿಸಿದರು. ಶ್ರೀಮತಿ ಪೂರ್ಣಿಮಆರ್. ಶೆಟ್ಟಿಕಾರ್ಯಕ್ರಮ ನಿರೂಪಿಸಿದರು.

Shakti Schoolಶಕ್ತಿ ಎಜ್ಯುಕೇಶನ್‌ಟ್ರಸ್ಟ್‌ನ ಆಡಳಿತಾಧಿಕಾರಿ ಶ್ರೀ ಬೈಕಾಡಿಜನಾರ್ದನಆಚಾರ್ ಶಕ್ತಿ ಶಿಕ್ಷಣ ಸಂಸ್ಥೆಗಳ ಒಟ್ಟು ಗುರಿಯನ್ನು ಸಾದರ ಪಡಿಸಿದರು. ಶಿಕ್ಷಣ ಎಂದರೆ ಕೇವಲ ಅಂಕಗಳಲ್ಲ. ಅಲ್ಲಿ ಮಾನವ ನಿರ್ಮಾಣದ ಕೆಲಸ ನಿರಂತರ ನಡೆಯಬೇಕು. ಮಾನವೀಯ ಮೌಲ್ಯಗಳ ಬೋಧನೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಮಿಲಿತವಾಗಿರಬೇಕು. ಆದುದರಿಂದಲೇ ಶಕ್ತಿ ಶಿಕ್ಷಣ ಸಂಸ್ಥೆಗಳಲ್ಲಿಯೋಗಾಭ್ಯಾಸ, ಧ್ಯಾನ, ಶ್ಲೋಕ ಕಂಠಪಾಠವಲ್ಲದೆ ಅದರ ಅರ್ಥ ವಿವರಣೆ ನೀಡಲಾಗುವುದು ಎಂದರು.

ಶಕ್ತಿ ಎಜ್ಯುಕೇಶನ್‌ಟ್ರಸ್ಟ್‌ನ ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ, ಸಂಸ್ಥೆಯಅಭಿವೃದ್ಧಿಅಧಿಕಾರಿ ಶ್ರೀಮತಿ ನಸೀಮ್ ಬಾನು, ಶಕ್ತಿ ಪ. ಪೂ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರಜಿ.ಎಸ್ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಶ್ರೀಮತಿ ನಿರ್ಮಲಾ ಸಕ್ಸೇನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English