ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು ವಿದ್ಯಾರ್ಥಿಗಳಲ್ಲಿರಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ವಿಕಿಪೀಡಿಯಾ ಅಸೋಸಿಯೇಷನ್ ವತಿಯಿಂದ ನಡೆಯಲಿರುವ 7 ದಿನಗಳ ’ವಿಕಿ ಕ್ಯಾಂಪ್ ಹಾಗೂ ಇಂಟರ್ನಶಿಫ್’ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ 8 ಜನ ವಿಕಿ ಸಾಧಕರಿಗೆ ಬಹುಮಾನ ರೂಪದಲ್ಲಿ ಪುಸ್ತಕವನ್ನು ನೀಡಲಾಯಿತು.
ಉದ್ಘಾಟನಾ ಕಾರ‍್ಯಕ್ರಮದ ಬಳಿಕ ಪದವಿ ಕಾಲೇಜಿನ ಮುಖ್ಯ ಗ್ರಂಥಪಾಲಕ ರಾಜೇಶ್ ಬಿ, ಗ್ರಂಥಾಲಯ ನಿರ್ವಹಣೆ ಮತ್ತು ಮಾಹಿತಿ ಸಂಗ್ರಹಿಸಲು ಆಧುನಿಕ ತಂತ್ರಜ್ಞಾನದ ಉಪಯೋಗಗಳ ಕುರಿತು ಮಾಹಿತಿ ನೀಡಿದರು. ಸಮಾರಂಭದಲ್ಲಿ ಪಿಕಿಪೀಡಿಯಾ ಅಸೋಸಿಯೇಶನ್ ಸಂಯೋಜಕ ಅಶೋಕ್ ಕೆಜಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English