ಮಂಗಳೂರು : 22 ವರ್ಷದ ವಿದ್ಯಾರ್ಥಿನಿಯೋರ್ವಳ ಮೃತದೇಹವು ಮಂಗಳೂರಿನ ಅತ್ತಾವರದ ಪೆಯೀಂಗ್ ಗೆಸ್ಟ್ ಯೊಂದರಲ್ಲಿ ಶುಕ್ರವಾರದಂದು ಸಂಜೆ ಪತ್ತೆಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆಯಿಂದ ವಿದ್ಯಾರ್ಥಿನಿ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಚಿಕ್ಕಮಗಳೂರು ಜಿಲ್ಲೆಯ ಮಂಜುನಾಥ ವೈ.ಎನ್ ಎಂಬವರ ಪುತ್ರಿ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಅಂಜನಾ ವಶಿಷ್ಠ (22) ಎಂದು ಹೇಳಲಾಗಿದೆ.
ಅತ್ತಾವರದಲ್ಲಿರುವ ಮೆಡಿಕಲ್ ಕಾಲೇಜು ಬಳಿಯ ಪೆಯೀಂಗ್ ಗೆಸ್ಟ್ನ ರೂಂನಲ್ಲಿ ಮೃತ ದೇಹ ಪತ್ತೆಯಾಗಿದೆ. ಕೊಲೆಯಾದ ಅಂಜನಾ ವಶಿಷ್ಠರ ತಲೆ ಮಂಚದ ಸರಳಿನ ನಡುವೆ ಸಿಲಿಕಿದ್ದು, ಕುತ್ತಿಗೆಭಾಗದಲ್ಲಿ ಕುರುಹುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯಾರೋ ಕೊಲೆ ಈಕೆಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಧಾರ್ ಕಾರ್ಡ್ ಮುಖಾಂತರ ವಿದ್ಯಾರ್ಥಿ ಗುರುತು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಮಹಜರು ಮಾಡಿದ್ದಾರೆ. ಜೊತೆಗೆ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಉಜಿರೆ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಅಂಜನಾ ವಸಿಷ್ಠ, ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ಮೂಲದವರು. 5 ದಿನಗಳ ಹಿಂದೆ ಪ್ರಿಯಕರ ಜೊತೆ ಬಂದು ಮನೆಯನ್ನು ಬಾಡಿಗೆ ಪಡೆದಿದ್ದರು ಎಂದು ಹೇಳಲಾಗಿದೆ.
ಅಂಜನಾ ವಾಸಿಸ್ಟಾ ಅವರು ಜೂನ್ 2ರಂದು ಓರ್ವ ಯುವಕನೊಂದಿಗೆ ಅತ್ತಾವರದಲ್ಲಿನ ಒಂದು ಮನೆಯಲ್ಲಿ ಅಲ್ಪಾವಧಿಗೆ ಬಾಡಿಗೆಗೆ ತೆಗೆದುಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಮಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಾನು ಮಂಗಳೂರಿಗೆ ಬಂದಿದ್ದೇನೆ ಎಂದು ಯುವಕ ಹೇಳಿದ್ದು, ಹುಡುಗಿಯ ಬಗ್ಗೆ ಕೇಳಿದಾಗ, ಆಕೆ ತನ್ನ ಹೆಂಡತಿ ಎಂದು ಹೇಳಿರುವ ಬಗ್ಗೆ ದಾಖಲೆಗಳು ಪೊಲೀಸರಿಗೆ ಲಭ್ಯವಾಗಿದೆ ಎಂದು ಹೇಳಲಾಗಿದೆ.
ಇವರ ಮಾತನ್ನು ನಂಬಿ ಇವರ ಮೇಲೆ ವಿಶ್ವಾಸವಿಟ್ಟು ಮನೆ ಯಾಜಮಾನ ಇವರಿಗೆ ಮನೆ ಮನೆಗೆ ಬಾಡಿಗೆಗೆ ಕೊಡಲು ಒಪ್ಪಿದ್ದಾರೆ.
ಜೂನ್ 7 ರ ಬೆಳಿಗ್ಗೆ ಹೊರ ಹೋಗಿದ್ದ ಅಂಜಾನಾ ಕೆಲವು ಸಮಯಗಳ ಬಳಿಕ ದಿನಸಿ ಸಾಮಾಗ್ರಿ ಜೊತೆ ಮರಳಿದ್ದರು ಎನ್ನಲಾಗಿದೆ..ಆದರೆ ರಾತ್ರಿ ವಿದ್ಯಾರ್ಥಿನಿ ಅಂಜನಾ ವಸಿಷ್ಠ ಮೃತದೇಹ ಪತ್ತೆಯಾಗಿದೆ. ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈಕೆಯ ಜೊತೆಗೆ ಮನೆಗೆ ಬಂದಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ.
ಮಾತ್ರವಲ್ಲದೇ ಅಂಜಾನರ ಡೆಬಿಟ್ ಕಾರ್ಡನ್ನು ಬಳಸಲಾಗಿದ್ದು, ಜೂನ್ 7ರಂದು ಮಧ್ಯಾಹ್ನ ಎರಡು ಎಟಿಎಂಗಳಿಂದ 15,000 ರೂ ಡ್ರಾ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಪ್ರಿಯಕರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಹಾಗೂ ವಿದ್ಯಾರ್ಥಿನಿ ಕುಟುಂಬದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಭಂದಿಸಿ ಸಂದೀಪ್ ರಾಥೋಡ್ ಬಾನು ರಾಥೋಡ್ ಅವರ ಮಗ, ಬೆನಕೋಟಗಿ ತಾಂಡಾ , ಸಿಂಧಿ ತಾಲೂಕು, ವಿಜಯಪುರದ ಜಿಲ್ಲೆ ಎಂಬಾತನನ್ನು ಇಂದು ಸಿಂಧಿ ಯಲ್ಲಿ ಬಂಧಿಸಲಾಗಿದೆ.
Click this button or press Ctrl+G to toggle between Kannada and English