ಮಂಗಳೂರು : ಕುಖ್ಯಾತ ಭೂಗತ ರೌಡಿ ರವಿ ಪೂಜಾರಿ ದಕ್ಷಿಣ ಆಫ್ರಿಕಾದ ಸೆನೆಗಲ್ನಿಂದ ಪರಾರಿಯಾಗಿರುವ ಬಗ್ಗೆ ವದಂತಿ ಹರಡಿದೆ.
ಸೆನೆಗಲ್ ಪೊಲೀಸರ ವಶದಲ್ಲಿದ್ದ ರವಿ ಪೂಜಾರಿ, ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಬೇಲ್ ಪಡೆದು ಬಿಡುಗಡೆಹೊಂದಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭವನ್ನೇ ಬಳಸಿಕೊಂಡು ಆತ ಸೆನೆಗಲ್ ನಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ವದಂತಿಯ ಸತ್ಯಾಸತ್ಯತೆ ತಿಳಿಯಲು ಕೇಂದ್ರ ಸರ್ಕಾರದ ನೆರವು ಕೋರಲಾಗುವುದು. ಬಳಿಕವಷ್ಟೇ ಘಟನೆಯ ಬಗ್ಗೆ ಸ್ಪಷ್ಟ ಚಿತ್ರ ದೊರೆಯಲು ಸಾಧ್ಯ ಎಂದು ರಾಜ್ಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.
Click this button or press Ctrl+G to toggle between Kannada and English