ಮಂಗಳೂರು : ರೆಫ್ರಿಜರೇಟರ್ ನ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದಿದೆ.
ಫರ್ಝಾನ ( 33 ) ಗಂಭೀರವಾಗಿ ಗಾಯಗೊಂಡವರು. ಜೊತೆಗೆ ಇವರ ಪತಿ ಸಿದ್ದಿಕ್ (38) ಮತ್ತು ಒಂದು ವರ್ಷದ ಮಗು ಫರಾನ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಸಿದ್ದಿಕ್ ಅವರು ಕಾಟಿಪಳ್ಳ ನಾಲ್ಕನೇ ಬ್ಲಾಕ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಂದು ಮಧ್ಯಾಹ್ನದ ಸಮಯ ಫರ್ಝಾನ ರೆಫ್ರಿಜರೇಟರ್ ನ ಸಿಲಿಂಡರ್ ನಲ್ಲಿ ಗ್ಯಾಸ್ ಸೋರಿಕೆಯನ್ನು ಗಮನಿಸದೆ ಅಡುಗೆ ಮಾಡಲು ಸ್ಟವ್ ಹೊತ್ತಿಸಿದಾಗ ಸಿಲಿಂಡರ್ ಸ್ಪೋಟವಾಗಿದೆ ಎಂದು ತಿಳಿದು ಬಂದಿದೆ.
ಸ್ಪೋಟದ ತೀವ್ರತೆಗೆ ಮನೆಯ ಮೇಲ್ಚಾವಣಿಯು ಭಾಗಶಃ ಸುಟ್ಟು ಹೋಗಿದೆ. ವಿದ್ಯುತ್ ಉಪಕರಣಗಳು, ಬಟ್ಟೆ ಬರೆ, ಅಡುಗೆ ಪಾತ್ರೆಗಳು, ಸುಟ್ಟು ಹೋಗಿವೆ. ಸುಮಾರು 40 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದರು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Click this button or press Ctrl+G to toggle between Kannada and English