ಬೆಳ್ತಂಗಡಿ: ಅಕ್ರಮವಾಗಿ ಐಶಾರಾಮಿ ಕಾರೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಣೆ ನಡೆಸುತ್ತಿದ್ದಾಗ ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾಗಿ 5 ಗೋವುಗಳ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾಗಿ 5 ಗೋವುಗಳ ಮೃತ್ಯುಮೂಡುಬಿದಿರೆ ತೋಡಾರ್ ಇದಾಯತ್ ನಗರ ನಿವಾಸಿ ಕಾರು ಮಾಲೀಕ ಅನ್ಸಾರ್ (27) ಹಾಗೂ ಜುಬೇರ್ (26) ಎಂಬವವರನ್ನ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಶಾಮೀಲಾಗಿರುವ ಶಂಕೆ ಇದ್ದು, ಅವರ ಬಂಧನಕ್ಕಾಗಿ ಶೋಧ ಮುಂದುವರಿದಿದೆ.
ಬೆಂಗಳೂರು ನೋಂದಣಿಯ ಕಾರನ್ನು ಅಕ್ರಮ ಗೋ ಸಾಗಾಟಕ್ಕೆ ಬಳಸಲಾಗಿತ್ತು. ತನಿಖೆ ವೇಳೆ ನಕಲಿ ನೋಂದಣಿ ಪ್ಲೇಟ್ ಎಂಬುದು ತಿಳಿದು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಸಂಬಂದ ಕರ್ತವ್ಯ ಲೋಪದ ಮೇರೆಗೆ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿ ಮಂಜುನಾಥ್ ಎಂಬುವವರನ್ನ ಅಮಾನತು ಮಾಡಲಾಗಿದೆ.
ಆರೋಪಿಗಳನ್ನು ಪತ್ತೆ ಹಚ್ಚಲು ತನಿಖಾಧಿಕಾರಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ತಂಡ ಮೂರು ದಿನಗಳಿಂದ ಮೂಡುಬಿದರೆಯಲ್ಲಿ ಠಿಕಾಣಿ ಹೂಡಿತ್ತು. ಕೊನೆಗೂ ಗೋ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Click this button or press Ctrl+G to toggle between Kannada and English