ಬಂಟ್ವಾಳದ ಎಸ್.ವಿ.ಎಸ್. ಸಂಘದಲ್ಲಿ ಬಹುಕೋಟಿ ಲೂಟಿ; ವೆಂಕಟರಮಣನ ಹೆಸರಲ್ಲಿ ಮತ್ತೊಂದು ನಾಮ

6:19 PM, Thursday, June 13th, 2019
Share
1 Star2 Stars3 Stars4 Stars5 Stars
(6 rating, 2 votes)
Loading...

svs collegeಬಂಟ್ವಾಳ : ಇದು ವ್ಯಾಪಾರಕ್ಕೆ ಹೆಸರುವಾಸಿ. ಇಲ್ಲಿ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಅದರಡಿಯಲ್ಲಿ ಪ್ರಾಥಮಿಕ, ಮಾದ್ಯಮಿಕ ಮತ್ತು ಹೈಸ್ಕೂಲು ಹಾಗು ಕಾಲೇಜುಗಳನ್ನು ಹಲವು ವರ್ಷಗಳ ಹಿಂದೆ ತೆರೆಯಲಾಯಿತು. ಕಳೆದ ಐದು ದಶಕಗಳಲ್ಲಿ ಈ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ಕಲಿತು ಜೀವನದಲ್ಲಿ ಮುಂದೆ ಬಂದಿದ್ದಾರೆ. ಆದರೆ ಕಳೆದ ಐದು ವರ್ಷಗಳಿಂದ ಈ ವಿದ್ಯಾ ಸಂಸ್ಥೆಗಳ ಮಾತೃ ಸಂಸ್ಥೆಯಾದ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಅವ್ಯವಹಾರಗಳಲ್ಲಿ ಮುಳುಗಿ ನಾರತೊಡಗಿದೆ. ಬಂಟ್ವಾಳದ ಸಜ್ಜನರು ಕಟ್ಟಿದ ಈ ಸಂಸ್ಥೆಗೆ ಕುಖ್ಯಾತ ಕ್ರಿಮಿನಲ್ ಕೂಡಿಗೆ ಮತ್ತು ಆತನಿಗೆ ಜೊತೆಗಾರನಾಗಿ ಮಹಾ ಸುಳ್ಳುಗಾರ ಬಿ.ವಿ.ಶೆಣೈ ಎಂಬಿಬ್ಬರು ಐನಾತಿಗಳು ಒಕ್ಕರಿಸಿಕೊಂಡ ಬಳಿಕ ದೇವರ ಹೆಸರಿನ ಈ ಸಂಸ್ಥೆಗೆ ಕಳಂಕ ಮೆತ್ತಿಕೊಂಡಿತು.

ಉಜಿರೆಯಿಂದ ವಿದ್ಯಾವರ್ಧಕ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ ಒಕ್ಕರಿಸಿಕೊಂಡ ಕೂಡಿಗೆ ಶೆಣೈ ಎಂಬ ಐನಾತಿ ಮತ್ತು ಬಂಟ್ವಾಳದವನೇ ಆದ ಬಿ.ವಿ.ಶೆಣೈ ಎಂಬ ನಾಮಧೇಯದ, ಬಾಯಿ ತೆರೆದರೆ ಸುಳ್ಳನ್ನು ಹೊರತು ಬೇರೇನನ್ನೂ ನುಡಿಯದೆ, ಈ ಇಬ್ಬರು ಕಳ್ಳ ?ಕುಳ್ಳ ಜೋಡಿ ಬಂಟ್ವಾಳದವರು ಕಟ್ಟಿದ ಈ ಸಂಸ್ಥೆಯನ್ನು ಲಗಾಡಿ ತೆಗೆದಿದ್ದಾರೆ. ಇವರಲ್ಲೊಂದು ಜೋಡೆತ್ತು ಹಿಂದೆ ಮಂಗಳೂರಿನ ನ್ಯಾಯಾಲಯ ಆವರಣದಲ್ಲಿ ತನ್ನ ಕಚ್ಚೆ ಹರುಕ ಬುದ್ದಿಯಿಂದಾಗಿ ಮಹಿಳಾ ವಕೀಲರೊಬ್ಬರಿಂದ ಬೇಜಾನ್ ಉಗಿಸಿಕೊಂಡಿದ್ದು, ಮಾತ್ರವಲ್ಲ ಆಕೆ ಕಾಲಲ್ಲಿದ್ದುದನ್ನು ಕೈಗೆತ್ತಿಕೊಂಡ ಬಳಿಕ ಅಲ್ಲಿಂದ ಪರಾರಿಯಾಗಿತ್ತು.

svs collegeಕಳೆದ ಐದು ವರ್ಷಗಳಿಂದ ವಿದ್ಯಾವರ್ಧಕ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನೇ ಕರೆದಿಲ್ಲ. ಅದಾದರೆ ಅದು ಅವರವರ ವ್ಯವಹಾರ ಎಂದು ಬಿಡಬಹುದಿತ್ತು. ಆದರೆ ಈ ಇಬ್ಬರ ಜೋಡಿ ಭಾಮಿ ಲಕ್ಷ್ಮಣ ಶೆಣೈ, ಬಿ. ರವಿದಾಸ ಪೈ, ಪಿ. ಗೌತಮ ಪೈ, ಪಿ.ಗಣೇಶ ಪ್ರಭು ಎಂಬವರ ಸಹಿಗಳನ್ನು ಪೋರ್ಜರಿ ಮಾಡಿದೆ. ವಾರ್ಷಿಕ ಸಾಮಾನ್ಯ ಸಭೆಯನ್ನು ಕರೆಯದೆ ದಾಖಲೆಗಳಲ್ಲಿ ಸಭೆ ಕರೆದಂತೆ ನಮೂದಿಸಿ ಕರ್ನಾಟಕ ಸರಕಾರದ ಸಹಕಾರ ಇಲಾಖೆಯನ್ನು ವಂಚಿಸಲಾಗಿದೆ, ಮಾತ್ರವಲ್ಲ ವಿದ್ಯಾ ಸಂಸ್ಥೆಯ ವರಿಷ್ಟರಾಗಿ ಸಮಾಜಕ್ಕೆ ದಾರಿ ತೋರಿಸಬೇಕಾದ ಈ ಇಬ್ಬರು ವಂಚನಾ ಕೃತ್ಯಕ್ಕೆ ಇಳಿದು ತಮ್ಮ ನೈತಿಕ ದಿವಾಳಿತನವನ್ನು ತೋರಿದ್ದಾರೆ.

2015 -16  ರ ಸಾಲಿನ ವಾರ್ಷಿಕ ಮಹಾ ಸಭೆಯನ್ನು ದಿನಾಂಕ 28-08-2016 ರಂದು ಎಸ್.ವಿ.ಎಸ್. ಪಿ.ಯು. ಕಾಲೇಜಿನಲ್ಲಿ ಕರೆದಿರುವುದಾಗಿ ಭಾಮಿ ವಿಟ್ಟಲದಾಸ .ಶೆಣೈ ಮತ್ತು ಕೂಡಿಗೆ ಪ್ರಕಾಶ ಶೆಣೈ ದಾಖಲೆಗಳನ್ನು ತಯಾರು ಮಾಡಿದ್ದಾರೆ. ಅದೇ ರೀತಿ 2016-17 ರ ಸಾಲಿನ ಮಹಾಸಭೆಯನ್ನು19-09-2017 ರಂದು ಎಸ್.ವಿ.ಎಸ್. ಪಿ.ಯು. ಕಾಲೇಜಿನಲ್ಲಿ ನಡೆಸಲಾಗಿದೆ ಎಂದು ಸರಕಾರಕ್ಕೆ ದಾಖಲೆ ತೋರಿಸಲಾಗಿದೆ. ಅದೇ ರೀತಿ 2015 ರ ಸಾಲಿನ ಮಹಾಸಭೆಯನ್ನೂ 20-09-2015 ರಂದು ಎಸ್.ವಿ.ಎಸ್. ಪಿ.ಯು. ಕಾಲೇಜಿನಲ್ಲಿ ನಡೆಸಿರುವುದಾಗಿ ದಾಖಲಿಸಲಾಗಿದೆ. ಆದರೆ ಈ ಸಭೆಗಳು ನಡೆದೇ ಇಲ್ಲ ಎಂಬ ಸಂಗತಿ ದಿನಾಂಕ 27-03-2019 ರಂದು ಮಂಗಳೂರಿನ ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಿದ ದೂರಿನಿಂದಾಗಿ ಬಹಿರಂಗಗೊಂಡಿದೆ. ಆಡಳಿತ ಮಂಡಳಿಯ ಸದಸ್ಯರಾದ ಐದು ಮಂದಿ ಈ ದೂರು ನೀಡಿದ್ದು ಅದರಲ್ಲಿ “ಕರ್ನಾಟಕ ಸರಕಾರದ ಸಹಕಾರಿ ಇಲಾಖೆಯ ಮಂಗಳೂರು ಕಚೇರಿ ವ್ಯಾಪ್ತಿಯಲ್ಲಿ ನೋಂದಣೆಯಾಗಿರುವ ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘ ಇದರ ವಾರ್ಷಿಕ ಮಹಾಸಭೆ ಕಳೆದ ನಾಲ್ಕು ವರ್ಷಗಳಿಂದ ನಡೆದಿಲ್ಲ. ನಿಯಾಮಾನುಸಾರ ಸಭೆಯು ಬಂಟ್ವಾಳ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಸಬೇಕಾಗಿರುತ್ತದೆ, ಆದರೆ ಈ ಸಭೆಯನ್ನು ಕರೆಯದೇ ಇರುವುದು ಕೆಲವು ಸಂಶಯಗಳಿಗೆ ಕಾರಣವಾಗಿದೆ” ಎಂದು ಬರೆಯಲಾಗಿದೆ. ಆಡಳಿತ ಮಂಡಳಿಯ ಸದಸ್ಯರಾದ ಬಿ. ರವಿದಾಸ ಪೈ, ಭಾಮಿ ಲಕ್ಷ್ಮಣ ಶೆಣೈ, ಪದ್ಮನಾಭ ಭಂಡಾರ್ಕಾರ್, ಗೌತಮ ಪ್ರಭು, ಗಣೇಶ ಪ್ರಭು, ಈ ಪತ್ರಕ್ಕೆ ಸಹಿ ಮಾಡಿದ್ದು “ ನಮ್ಮ ಗೈರು ಹಾಜರಿಯಲ್ಲ್ಲಿ ಮಹಾಸಭೆ ನಡೆಸಿದ್ದೇ ಆದರೆ ಆ ಸಭೆಯ ಠರಾವುಗಳಿಗೆ ನಾವು ಸಹಿ ಹಾಕಿರುವುದಿಲ್ಲ . ಈ ಬಗ್ಗೆ ತಾವು ಕೂಲಂಕಷ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಜರುಗಿಸಬೇಕು ಎಂದು ವಿನಂತಿ ಮಾಡುವುದಾಗಿ “ ಹೇಳಿದ್ದಾರೆ. ಈ ಮನವಿಯನ್ನು ಸ್ವೀಕರಿಸಿರುವ ಸಹಕಾರ ಇಲಾಖೆಯ ಮಂಗಳೂರು ಕಚೇರಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದಾಗಿ ಪೋರ್ಜರಿ ಸಹಿ ಮಾಡಿದ್ದಕ್ಕಾಗಿ ಕಂಬಿ ಎಣಿಸಬೇಕಾಗಿರುವ ಇಬ್ಬರು ಧೂರ್ತರು ಸಂಘದ ದುಡ್ಡನ್ನು ಲೂಟಿ ಹೊಡೆದು ಆರಾಮದ ಬದುಕು ಬದುಕುತ್ತಿದ್ದಾರೆ.

svs collegeಉಜಿರೆಯಿಂದ ಆಮದಾಗಿರುವ ಕೂಡಿಗೆ ಎಂಬ ವ್ಯಕ್ತಿ ಲಟಾರಿ ವಾಹನದಲ್ಲಿ ಬರುತ್ತಿದ್ದವರು ಬೇನಾಮಿ ಹೆಸರಿನಲ್ಲಿ ಮೂರು ಎಸ್.ವಿ.ಯು.ಗಳನ್ನು ಬರೇ ಮೂರು ವರ್ಷಗಳಲ್ಲಿ ಮಾಡಿಕೊಂಡಿದ್ದಾರೆ. 2019 ರ ವರ್ಷದಲ್ಲಿ ನೇಮಕಾತಿ ಮಾಡಿಕೊಳ್ಳಲು ಸರಕಾರ ಅನುಮೋದನೆ ನೀಡಿದ್ದು, ಇದರಲ್ಲಿ ಕಳ್ಳ-ಕುಳ್ಳರ ಜೋಡಿ ಎರಡು ಕೋಟಿ ದುಡ್ಡು ಮಾಡಿಕೊಂಡಿದೆ ಎಂದು ಬಂಟ್ವಾಳ ಪೇಟೆಯ ಭಂಡಸಾಲೆಗಳೂ, ಜಗುಲಿಗಳೂ ಘಂಟಾ ಘೋಷವಾಗಿ ಸಾರುತ್ತಿವೆ. ಸಾಮಾನ್ಯವಾಗಿ ಅನುದಾನಿತ ಕಾಲೇಜು ಗಳು ನೇಮಕಾತಿ ಮಾಡಿಕೊಳ್ಳುವಾಗ ಪ್ರತಿಭೆಯ ಜೊತೆ ಸ್ಥಳೀಯರಿಗೆ, ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡುತ್ತವೆ. ಆದರೆ ಈ ಬಾರಿ ನೇಮಕಾತಿಯಲ್ಲಿ ಸ್ಥಳೀಯ ಅರ್ಹರಿಗೆ ಯಾವುದೇ ಪ್ರಾಧಾನ್ಯ ನೀಡಿಲ್ಲ. ಕಾಮರ್ಸ್ ನ ಒಂದು ಹುದ್ದೆಯನ್ನು ಹೊರತುಪಡಿಸಿ ಉಳಿದ ಹುದ್ದೆಗಳನ್ನು ಹಲವು ಲಕ್ಷಗಳಿಗೆ ಹರಾಜು ಮಾಡಲಾಗಿದೆ. ಕಾಮರ್ಸ್ ಒಂದು ಹುದ್ದೆಗೆ ಜಂಟಿ ಕಾರ್ಯದರ್ಶಿಯ ಸಂಬಂಧಿಯೇ ಇದ್ದುದರಿಂದ ಅದನ್ನು ಆ ವ್ಯಕ್ತಿಗೆ ಕೊಡುವಂತೆ ತಜ್ಞ್ರ ಸಮಿತಿಯಿಂದ ಶಿಫಾರಸು ಮಾಡಿಸಲಾಗಿದೆ. ಕಾಲೇಜಿನ ಹಳೆ ವಿದ್ಯಾರ್ಥಿಯೊಬ್ಬರು ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ್ದರು. ಅವರಿಗೆ ಸಂದರ್ಶನಕ್ಕೆ ಕರೆಯನ್ನು ಕೂಡಾ ಕಳಿಸಲಾಗಿಲ್ಲ. ಆ ಹಳೆ ವಿದ್ಯಾರ್ಥಿಯು ಪ್ರಾಂಶುಪಾಲ ಪಾಂಡುರಂಗ ನಾಯಕ್ ಗೆ ಫೋನ್ ಮಾಡಿ ’ಏನ್ ಸಾರ್ ಇದೆಲ್ಲ. ನಿಮಗೆ ನಿಮ್ಮ ಕಾಲೇಜಿನ ಮೇಲೆ ಅಭಿಮಾನ ಇಲ್ಲವೆ ? . ನಾನು ಎರಡು ಸಾವಿರ ರೂಪಾಯಿ ಅರ್ಜಿ ಜೊತೆ ಕಟ್ಟಿದ್ದೇನೆ, ನನಗೆ ಇಂಟರ್ವ್ಯೂ ಕಾರ್ಡ್ ಬಂದಿಲ್ಲ” ಎಂದು ದುಃಖ ತೋಡಿಕೊಂಡದ್ದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಪ್ರಾಂಶುಪಾಲರು ’ನಾನೇನು ಮಾಡಲಿ, ಎಲ್ಲ ಅವರು ಮಾಡಿದ್ದು” ಎಂದು ಕರೆಸ್ಪಾಂಡೆಂಟ್ ಕೂಡಿಗೆಯತ್ತ ಬೆರಳು ಮಾಡಿ ತಮ್ಮ ಅಸಹಾಯಕತೆಯನ್ನು ತೋರಿಸಿದ್ದಾರೆ. ವೈಯಕ್ತಿಕವಾಗಿ ಭ್ರಷ್ಟನಲ್ಲದ, ಬೇರೆಯವರ ದುಡ್ಡಿಗೆ ಕೈಚಾಚದ ಪಾಂಡುರಂಗ ನಾಯಕ್ ಅದ್ಯಾವ ಮಾಯಕವೋ ಕೂಡಿಗೆಯ ಅಕ್ರಮಗಳಿಗೆಲ್ಲ ಸಹಿ ಹಾಕಿ ತನ್ನ ಕಾಲ ಮೇಲೆ ಕಲ್ಲು ಚಪ್ಪಡಿ ಹಾಕಿಕೊಂಡು ನಿದ್ರಾಹೀನರಾಗಿದ್ದಾರೆ.

ವಿದ್ಯಾರ್ಥಿ ವಿರೋಧಿ :
ಕಳೆದ ಶೈಕ್ಷಣಿಕ ವರ್ಷದಲ್ಲಿ ಆರು ಮಂದಿ ವಿದ್ಯಾರ್ಥಿಗಳಿಗೆ ಕೂಡಿಗೆ ಮತ್ತು ಪ್ರಾಂಶುಪಾಲ ನಾಯಕ್ ಜೋಡಿ ಪರೀಕ್ಷಾ ಹಾಲ್ ಟಿಕೇಟ್ ನೀಡದೆ ಅವರ ಭವಿಷ್ಯಕ್ಕೆ ಮೊಳೆ ಹೊಡೆಯಿತು. ಕೂಡಿಗೆ ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಉಪನ್ಯಾಸಕರೊಬ್ಬರನ್ನು ಕೆಲಸದಿಂದ ವಜಾ ಮಾಡಿದಾಗ ಸಹಜವಾಗಿಯೇ ವಿದ್ಯಾರ್ಥಿಗಳು ಮುಷ್ಕರ ನಡೆಸಿದ್ದರು. ಆಗ ನಿಮ್ಮನ್ನೆಲ್ಲ ಸೇನೆ ಕರೆಸಿ ಒಳಗೆ ಹಾಕುತ್ತೇನೆ ಎಂದು ಈ ಕೂಡಿಗೆ ಖದೀಮ ಬೋಂಗು ಬಿಟ್ಟ . ಹಳ್ಳಿಯ ಮಕ್ಕಳು ಹೆದರಿದರು. ಆಗ ವಿದ್ಯಾರ್ಥಿಗಳ ಬೆಂಬಲಕ್ಕೆ ಬಂದು ಕೂಡಿಗೆಯ ಲೈಂಗಿಕ ಹಗರಣ ಸಹಿತ ಆತನನ್ನು ಬಹಿರಂಗವಾಗಿ ಬೈದು ಹೋದವರು ಬಂಟ್ವಾಳದ ಜನಪ್ರಿಯ ನಾಯಕ ಗೋವಿಂದ ಪ್ರಭು. ಸಿಟ್ಟಿನಿಂದ ಕುದಿಯುತ್ತಿದ್ದ ಗೋವಿಂದ ಪ್ರಭು ಅಂದು ಕೂಡಿಗೆಯನ್ನು ಯಾವ ಪರಿ ಬೈದಿದ್ದರೆಂದರೆ ತಾಕತ್ತಿದ್ದರೆ ಬಾ…ಮಗನೆ ಎಂದಿದ್ದರು. ಗಡಗಡ ನಡುಗುತ್ತಿದ್ದ ಕೂಡಿಗೆ ಓಡಿ ಹೋಗಿ ತನ್ನ ಕೊಠಡಿಯ ಬಾಗಿಲು ಹಾಕಿಕೊಂಡಿದ್ದ. ಆ ಅವಮಾನವನ್ನು ಬಡಪಾಯಿ ವಿದ್ಯಾರ್ಥಿಗಳ ಮೇಲೆ ತೀರಿಸಿಕೊಂಡ. ಬಲಿಪಶುಗಳಾದವರು ಬಂಟ್ವಾಳದ ವಿದ್ಯಾರ್ಥಿಗಳು.

ಈ ಎಲ್ಲ ಕಾರಣಗಳಿಂದ ಈ ವರ್ಷ ಕಾಲೇಜಿಗೆ ಸ್ಥಳೀಯ ವಿದ್ಯಾರ್ಥಿಗಳ ಸೇರ್ಪಡೆ ಗಮನೀಯವಾಗಿ ಇಳಿದಾಗ ಕೂಡಿಗೆ ಮತ್ತು ಭಾಮಿ ಗ್ಯಾಂಗ್ ಕಾಲೇಜಿನ ಆಡಳಿತ ಮಂಡಳಿ ಬದಲಾಗುತ್ತದೆ, ಎಂದು ಸುದ್ದಿ ಹಬ್ಬಿಸಿದ್ದಲ್ಲದೆ ಸಂಘದ ಸಾಮಾನ್ಯ ಸಭೆ ಕರೆಯುವ ನೋಟೀಸು, ಪ್ರಕಟಣೆ ಹೊರಡಿಸಿದರು. ಅದರಿಂದ ಕಾಲೇಜಿಗೆ ವಿದ್ಯಾರ್ಥಿ ಸೇರ್ಪಡೆ ಹೆಚ್ಚಿತು. ಈ ಸಂಖ್ಯೆ ತಮ್ಮ ನಿರೀಕ್ಷೆಯಷ್ಟಾಗಿತ್ತಿದ್ದಂತೆ, ತಕ್ಷಣ ಈ ಇಬ್ಬರು ಸಭೆಯನ್ನು ರದ್ದು ಮಾಡಲಾಗಿದೆ ಎಂದು ಪ್ರಕಟಣೆ ಕೊಟ್ಟರು. ಇದಕ್ಕಾಗಿ ಭಾಮಿ ದೊಡ್ಡ ಗಂಟನ್ನು ಇನಾಮು ಆಗಿ ಪಡೆದುಕೊಂಡ. ಹೊರನೋಟಕ್ಕೆ ಭಯಂಕರ ಆದರ್ಶವಾದಿಯಂತೆ ಮಾತನಾಡುವ ಮಹಾ ವಿಷಜೀವಿ ಭಾಮಿಗೆ ಬಂಟ್ವಾಳದಲ್ಲಿ ಪ್ರಚಲಿತದಲ್ಲಿರುವ ಇನ್ನೊಂದು ಹೆಸರು ಕಂದೋಡಿ.

ಬಂಟ್ವಾಳದ ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಅವಸಾನದ ಹಾದಿಯನ್ನು ತಡೆಯಲು ಸ್ಥಳೀಯ ಹಿರಿಯ ತಲೆಮಾರು ಒದ್ದಾಡುತ್ತಿದೆ. ಆದರೆ ದುಷ್ಟದ್ವಯರ ಮುಂದೆ ಸಜ್ಜನರು ಅಸಹಾಯಕರಾಗುತ್ತಿದ್ದಾರೆ. ದಾಖಲೆ ಸಹಿತ ದೂರು ಕೊಟ್ಟರೂ ಸರಕಾರದ ಇಲಾಖೆ ಸ್ಪಂದಿಸುತ್ತಿಲ್ಲ ಎನ್ನುವುದು ಅವರ ಕೊರಗು.

ಕೃಪೆ : ಮೆಗಾ ಮೀಡಿಯಾ ನ್ಯೂಸ್ ಪತ್ರಿಕೆ 

image description

7 ಪ್ರತಿಕ್ರಿಯ - ಶೀರ್ಷಿಕೆ - ಬಂಟ್ವಾಳದ ಎಸ್.ವಿ.ಎಸ್. ಸಂಘದಲ್ಲಿ ಬಹುಕೋಟಿ ಲೂಟಿ; ವೆಂಕಟರಮಣನ ಹೆಸರಲ್ಲಿ ಮತ್ತೊಂದು ನಾಮ

  1. Chandan, Bhadravathi

    Ppappapa

  2. SVS hater,

    Finally theifs are out now……..some faculty ( HM ) peoples are involved to….plsss watch out that….I feel shame that I was a student of that institution …..

  3. Rama, Vittla

    His name is kudige prakash Shenoy. They didn’t mention in the above statement

  4. Vishnu Pujari, Bantwal

    Dear Srinivas Prabhu.
    I too have studied in the same college, trust me my lecturers were great. I have learnt a lot and I can do anything to save the image of my Alma Mater. I started my career at Svs and I have been among great people like Lt. Raghunandan sir, Prof. Thukaram Pujari, and many others.
    People with whom I was working were never lazy, infact they were the face of SVS and were highly dedicated and respectful.
    Bt it’s a great irony that people who are controlling the college now are money minded.
    Those who left, were not lazy or kaamchor
    They had self respect and they never wanted to be anybody’s chamcha. It’s good u have concern about the college bt it’s not good to call some1 kaamchor or whatever u say. It show’s ur character.

  5. Srinivas Prabhu, Bantwal

    Even I have studied in SVS College but now wrkng at bangalore….My cousin is studyng there presently nd as I got to knw frm him that there are lot of improvement in all respect compared to past since 5 years….also got to know that present management is wrking for the overall developmmt nd placing studnts in gud jobs…bt as bfre none of staff wish to wrk ter for improvemnent of clg..since managemt is strict nw and force evryone to wrk its difficult fr kaamchor ppl to survive so all this drama….parents are happy wit present managmnt since it thinks oly to keep students on rite track…..ppl who dnt have wrk nd alwaz try to mint money dng all this blunders can oly do this….this media is one more to support nd share such money…..useless ppl….instead u ppl can sit and beg in road…..lol….

  6. Gautham shenoy, Kalladka

    ಇದು ನಾನು ಕಲಿತ ವಿದ್ಯಾಸಂಸ್ಥೆ … ಇದನ್ನು ರಕ್ಷಿಸಿ … ಉಳಿಸಿ ಹಾಗೂ ಬೆಳೆಸಿ .. ಎಂಬುದೇ . ನನ್ನ ವಿನಂತಿ … ಹಿರಿಯರು ಮಾಡಿರುವುದು ನಿಜವೋ . ಸುಳ್ಳೋ ಗೊತ್ತಿಲ್ಲ … ಇದನ್ನು ಬೆಳೆಸುವುದು . ಅವರಿಗೆ ಬಿಟ್ಟ ವಿಷಯ …

  7. Ravichandra g, Bantwal

    SAVE IN SVS

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English