ದೇವರಲ್ಲಿ ದೃಢ ಭಕ್ತಿ ಮಾಡಿದರೆ ಅವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ : ವಿಧುಶೇಖರ ಭಾರತೀ ಸ್ವಾಮೀಜಿ

1:04 PM, Friday, June 21st, 2019
Share
1 Star2 Stars3 Stars4 Stars5 Stars
(No Ratings Yet)
Loading...

Vidhushekara-Swamijiವೇಣೂರು  : ದೇವನೊಬ್ಬ ನಾಮ ಹಲವು ಎಂಬಂತೆ ನಾವು ದೇವರನ್ನು ವಿವಿಧ ಹೆಸರಿನಲ್ಲಿ, ಅನೇಕ ರೂಪಗಳಲ್ಲಿ ಆರಾಧನೆ ಮಾಡುತ್ತೇವೆ. ಧರ್ಮದ ಅನುಷ್ಠಾನದೊಂದಿಗೆ ದೇವರಲ್ಲಿ ದೃಢ ಭಕ್ತಿ ಮಾಡಿದರೆ ಅವರ ಅನುಗ್ರಹಕ್ಕೆ ನಾವು ಪಾತ್ರರಾಗುತ್ತೇವೆ. ನಮಗೆ ಯಶಸ್ಸು, ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಶೃಂಗೇರಿಯ ಶ್ರೀ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಅವರು ಗುರುವಾರ ವೇಣೂರಿನಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿ ಆಶೀರ್ವದಿಸಿದರು.

ಅನಾದಿ ಕಾಲದಿಂದ ಅನುಸರಿಸಿಕೊಂಡು ಬಂದ ಸನಾತನಧರ್ಮ ಮತ್ತು ಸಂಸ್ಕೃತಿಯ ಪರಂಪರೆಯನ್ನು ನಾವು ಮುಂದುವರಿಸಬೇಕು.ಊರಿನದೇವಸ್ಥಾನವನ್ನು ಸುಸ್ಥಿತಿಯಲ್ಲಿಟ್ಟು ನಿರಂತರದೇವರ ಪೂಜೆ, ಉತ್ಸವ ಹಾಗೂ ಆರಾಧನೆಯನ್ನು ಶಾಸ್ತ್ರೋಕ್ತವಾಗಿ ಮಾಡಿದರೆದೇವರು ಸಂತುಷ್ಟರಾಗಿಎಲ್ಲರನ್ನೂಅನುಗ್ರಹಿಸುತ್ತಾರೆ.ಊರಿನ ಸರ್ವತೋಮುಖ ಪ್ರಗತಿಯಾಗುತ್ತದೆ.ಶಾಂತಿ, ನೆಮ್ಮದಿ ನೆಲೆಸುತ್ತದೆ.

ವೇದ, ಶಾಸ್ತ್ರ, ಪುರಾಣಗಳಲ್ಲಿ ಸಾರ್ಥಕ ಬದುಕಿಗೆ ಬೇಕಾದಅನುಭವಾಮೃತ ನೀಡಲಾಗಿದೆ.ದೇವರಿಗೆಎಲ್ಲರೂ ಸಮಾನ. ಯಾರ ಮೇಲೆಯೂರಾಗ-ದ್ವೇಷಇರುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೆಉತ್ತಮ ಪ್ರತಿಫಲ ಸಿಗುತ್ತದೆ. ಕೆಟ್ಟ ಕೆಲ ಮಾಡಿದದರೆಕೆಟ್ಟ ಪರಿಣಾಮಉಂಟಾಗುತ್ತದೆ.

ಭಗವಂತನ ಸೇವೆ, ಗುರುಗಳ ಸೇವೆ ಮತ್ತು ಸಮಾಜ ಸೇವೆಯನ್ನುಎಲ್ಲರೂತಮ್ಮ ಶಕ್ತ್ಯಾನುಸಾರ ಮಾಡಬೇಕುಎಂದು ಸ್ವಾಮೀಜಿ ಸಲಹೆ ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು. ಹೃದಯ ಶ್ರೀಮಂತಿಕೆಯೊಂದಿಗೆ ದೇವರ ಸೇವೆ ಹಾಗೂ ಸಮಾಜ ಸೇವೆ ಮಾಡಬೇಕು. ಹೃದಯ ಶ್ರೀಮಂತಿಕೆಯಿಂದ ನಾವು ಎಲ್ಲರ ಪ್ರೀತಿ, ವಿಶ್ವಾಸ ಮತ್ತುಗೌರವಕ್ಕೆ ಪಾತ್ರರಾಗುತ್ತೇವೆಎಂದು ಹೇಳಿದರು.
ಸಾರ್ಥಕ ಬದುಕಿಗೆಧಾರ್ಮಿಕ ಸಂದೇಶ ನೀಡುವುದೇ ದೇವಾಲಯಗಳ ಉದ್ದೇಶವಾಗಿದೆ.ದೇವರಘನತೆ, ಗೌರವಕ್ಕೆ ಸರಿಯಾದದೇವಾಲಯ ನಿರ್ಮಾಣ ಮಾಡಬೇಕು. ಇತ್ತೀಚೆಗೆಜೀರ್ಣೋದ್ಧಾರಗೊಂಡ ದೇವಾಲಯಗಳು ಆಕರ್ಷಕ ವಿನ್ಯಾಸ ಹಾಗೂ ಮರದಕೆತ್ತನೆಯೊಂದಿಗೆಉತ್ತಮವಾಗಿ ಮೂಡಿ ಬರುತ್ತಿವೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದ ಧರ್ಮೋತ್ಥಾನಟ್ರಸ್ಟ್ ವತಿಯಿಂದರಾಜ್ಯದಲ್ಲಿರುವ ೨೪೮ ಐತಿಹಾಸಿಕ ದೇವಾಲಯಗಳನ್ನು ಶಿಲಾಮಯವಾಗಿ ಜೀರ್ಣೋದ್ದಾರಗೊಳಿಸಲಾಗಿದೆ ಎಂದು ಹೆಗ್ಗಡೆಯವರು ತಿಳಿಸಿದರು.

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಅಯನಾ ವಿ.ರಮಣ್ ಮತ್ತು ಬಳಗದವರು ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದರು.

ಎ. ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿಮಾತನಾಡಿಜೀರ್ಣೋದ್ಧಾರಕಾರ್ಯದ ಪ್ರಗತಿ ಸಾದರ ಪಡಿಸಿದರು.
ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ.ವಸಂತ ಬಂಗೇರ, ಮೂಡಬಿದ್ರೆಯಡಾ.ಎಂ.ಮೋಹನ ಆಳ್ವ, ಸುರೇಶ್ ಶೆಟ್ಟಿ, ಬಿ.ರಘುನಾಥ ಸೋಮಯಾಜಿ, ಮಂಜುನಾಥ ಭಂಡಾರಿ, ಶ್ರೀಪತಿ ಭಟ್ ಮೂಡಬಿದ್ರೆ ಮತ್ತು ಎ.ಸಿ. ಭಂಡಾರಿ ಉಪಸ್ಥಿತರಿದ್ದರು.

ಅಳದಂಗಡಿ ಅರಸರಾದಡಾ. ಪದ್ಮಪ್ರಸಾದಅಜಿಲ ಸ್ವಾಗತಿಸಿದರು. ಪಿ. ಧರಣೇಂದ್ರಕುಮಾರ್‌ಧನ್ಯವಾದವಿತ್ತರು.
ಕಿಶೋರ್‌ಭಂಡಾರಿ ಮತ್ತು ಸುಂದರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English