ಡೆಂಗ್ಯೂ ಜ್ವರ ಭೀತಿ : ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆ ಮೃತ

2:25 PM, Thursday, June 27th, 2019
Share
1 Star2 Stars3 Stars4 Stars5 Stars
(3 rating, 1 votes)
Loading...

veenaಮಂಗಳೂರು: ಡೆಂಗ್ಯೂ ಜ್ವರ ಜ್ವರದಿಂದ ಬಳಲುತ್ತಿದ್ದ ಮಹಿಳೆವೋರ್ವರು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ನಿವಾಸಿ ಆನಂದ ನಾಯ್ಕ್ ಎಂಬುವರ ಪತ್ನಿ ವೀಣಾ (43) ಮೃತರು.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವೀಣಾ ಅವರಿಗೆ ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರ ದೇಹದಲ್ಲಿ ಬಿಳಿ ರಕ್ತಕಣ ಕಡಿಮೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ  ಬೆಳಗ್ಗೆ ಮೃತಪಟ್ಟಿದ್ದಾರೆ.

ಈ ಬಗ್ಗೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ವೀಣಾ ಅವರು ಡೆಂಗ್ಯೂ ಜ್ವರದಿಂದಲೇ ಮೃತಪಟ್ಟಿದ್ದಾರೆಂದು ಇನ್ನೂ ದೃಢಪಟ್ಟಿಲ್ಲ. ರಕ್ತಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಇನ್ನೂ ಅದರ ರಿಪೋರ್ಟ್ ಬಂದಿಲ್ಲ. ರಿಪೋರ್ಟ್ ಬಂದ ಮೇಲೆ ಆಡಿಟ್ ಕಮಿಟಿಯಲ್ಲಿರಿಸಿ, ಬಳಿಕ ಬೆಂಗಳೂರಿಗೆ ಕಳುಹಿಸಿ ಖಚಿತ ಮಾಹಿತಿ ನೀಡಲಾಗುತ್ತೆ ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English