ಯುವತಿಯೊಂದಿಗೆ ನಗ್ನವಾಗಿರುವ ವಿಡಿಯೋ ಮಾಡಿಸಿಕೊಂಡು ಹಣ ಕಳಕೊಂಡ ಬಂಟ್ವಾಳ ಮೀನು ವ್ಯಪಾರಿ

1:49 PM, Friday, June 28th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

darshni ಬಂಟ್ವಾಳ : ಮಡಿಕೇರಿಯ ಯುವತಿಯೊಂದಿಗೆ ನಗ್ನ ವಾಗಿರುವ ಅಶ್ಲೀಲ ವಿಡಿಯೋ ತೋರಿಸಿ ಹಣಕ್ಕಾಗಿ ಅಪಹರಿಸಿ ದರೋಡೆ ನಡೆಸಿದ ಅಪರಿಚಿತ ವ್ಯಕ್ತಿಯ ವಿರುದ್ದ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಟಿಪ್ಪು ನಗರದ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ  ಈ ರೀತಿ ಯುವತಿಯೊಂದಿಗೆ  ವಿಡಿಯೋ ಮಾಡಿಸಿಕೊಂಡು ಹಣ ಕಳಕೊಂಡಿದ್ದಾನೆ .

ಬಂಟ್ವಾಳ ನಿವಾಸಿಯಾಗಿರುವ ಅಬ್ದುಲ್ ರಹಿಮಾನ್ ಗೆ ವಾಯ್ಸ್ ಮೆಸೇಜ್ ಮೂಲಕ ಸುಮಾರು 8 ತಿಂಗಳ ಹಿಂದೆ ಒರ್ವ ಹುಡುಗಿಯ ಪರಿಚಯವಾಗಿದ್ದು ಕೆಲವು ದಿನಗಳ ನಂತರ ಆ ಹುಡುಗಿಯನ್ನು ಮಂಗಳೂರಿನ ಲಾಡ್ಜ್ ಒಂದರಲ್ಲಿ ಅವರನ್ನು ಬೇಟಿಯಾಗಿದ್ದಾರೆ. ಆ ಸಮಯ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದ್ದೂ, ಆ ಅಶ್ಲೀಲ ವಿಡಿಯೋವನ್ನು ಹುಡುಗಿಯು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆ ನಡೆದ ಕೆಲವು ದಿನಗಳ ನಂತರ ದೂರುದಾರರಿಗೆ ಅಪರಿಚಿತ ವ್ಯಕ್ತಿಯೋರ್ವ ಈ ಅಶ್ಲೀಲ ವಿಡಿಯೋವನ್ನು ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು  ಆರೋಪಿಸಲಾಗಿದೆ. ಈ ಬಗ್ಗೆ ದೂರು ನೀಡಿರುವ ವ್ಯಕ್ತಿಯು ಹುಡುಗಿಯಲ್ಲಿ ವಿಚಾರಿಸಲಾಗಿ ಆಕೆ ತನ್ನ ಮೊಬೈಲ್ ರಿಪೇರಿಗೆ ಕೊಟ್ಟ ಸಮಯ ಬೇರೆಯವರಿಗೆ ದೊರಕಿದೆ ಎಂದು ತಿಳಿಸಿರುತ್ತಾಳೆ.

darshniವಿಡಿಯೋವನ್ನು ಪಡೆದ ವ್ಯಕ್ತಿ ವಿಡಿಯೋವನ್ನು ಬಳಸಿ ದೂರುದಾರರಿಗೆ ನಿರಂತರವಾಗಿ ಹಣಕ್ಕಾಗಿ ಪೀಡಿಸುತ್ತಿದ್ದು, ಅವರು ಹಣ ಕೊಡಲು ಒಪ್ಪದಿದ್ದಾಗ ಬಂಟ್ವಾಳದಲ್ಲಿ 4 ಜನ ಅಪರಿಚಿತರು ದೂರುದಾರರನ್ನು ಅಪಹರಿಸಿ ಅವರ ಬಳಿಯಿದ್ದ 60,000 ರೂಪಾಯಿಗಳನ್ನು ಮತ್ತು ಪರ್ಸನ್ನು ಬಲವಂತವಾಗಿ ಕಿತ್ತುಕೊಂಡು,ಬಳಿಕ ATM ಕಾರ್ಡ್ ನ್ನು ಬಳಸಿ 9,000 ರೂ ಗಳನ್ನು ಪಡೆದಿರುತ್ತಾರೆ.

ಅಲ್ಲದೆ ಅವರನ್ನು ಮತ್ತೆ ಬೆದರಿಸಿ ಅದೇ ದಿನ 48,000 ರೂ ಗಳನ್ನು ಆರೋಪಿಗಳು ಪಡೆದಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಿ ಹಣಕ್ಕಾಗಿ ನಿರಂತರ ಬೆದರಿಕೆ ಒಡ್ಡಿದ್ದಾರೆ ದೂರಿನಲ್ಲಿ ತಿಳಿಸಿದೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 363, 323, 504, 392, 383, 506 ಜೊತೆಗೆ 34 ಐ.ಪಿ.ಸಿ ಮತ್ತು 66E & 67A ಐ.ಟಿ ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.

darshani

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English