ನಿರ್ಮಯ್ ವೈ. ಎನ್ ಮತ್ತು ಆಯುಷ್ ಲೆಹಲ್ ಮಹೇಶ್ ಗೆ ತಲಾ 3 ಚಿನ್ನದ ಪದಕ

7:34 PM, Saturday, June 29th, 2019
Share
1 Star2 Stars3 Stars4 Stars5 Stars
(No Ratings Yet)
Loading...

Nirmaiಮಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮೈಸೂರಿನಲ್ಲಿ ಜೂನ್ 21ರಿಂದ 23 ರ ವರೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಓಪನ್ ಸ್ಟೇಟ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ನಿರ್ಮಯ್ ವೈ.ಎನ್ ಇವರು 9 ರಿಂದ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ 500 ಮೀ ರೋಡ್ ರೇಸ್, 500 ಮೀ ರಿಂಕ್ ರೇಸ್ ಮತ್ತು 1000 ಮೀ ರಿಂಕ್ ರೇಸ್ ನಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿರುತ್ತಾರೆ.

ನಿರ್ಮಯ್ ವೈ. ಎನ್ (9 ವರ್ಷ) ಇವರು ನಗರದ ಹೊಯಿಗೆಬೈಲುನಿವಾಸಿಗಳಾದ ಯದುನಂದನ ಮತ್ತು ವಿಜಯಲಕ್ಷ್ಮೀ ದಂಪತಿಯ ಪುತ್ರನಾಗಿದ್ದು, ನಗರದ ಡೊಂಗರಿಕೇರಿಯ ಕೆನರಾ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ. ಇವರು ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಹೊಯಿಗೆಬೈಲುನ ತರಬೇತಿದಾರರಾದ ಮೋಹನ್ ದಾಸ್. ಕೆ ಮತ್ತು ಜಯರಾಜ್ ರವರಿಂದ ತರಬೇತಿ ಪಡೆದಿದ್ದಾರೆ.

ಆಯುಷ್ ಲೆಹಲ್ ಮಹೇಶ್ ಗೆ 3 ಚಿನ್ನದ ಪದಕ

Mahesh  7 ರಿಂದ 9 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ 500 ಮೀ ರೋಡ್ ರೇಸ್, 500 ಮೀ ರಿಂಕ್ ರೇಸ್ ಮತ್ತು 1000 ಮೀ ರಿಂಕ್ ರೇಸ್ ನಲ್ಲಿ ಆಯುಷ್ ಲೆಹಲ್ ಮಹೇಶ್ 3 ಚಿನ್ನದ ಪದಕವನ್ನ್ನು ಗೆದ್ದಿರುತ್ತಾರೆ.

ಆಯುಷ್ ಲೆಹಲ್ ಮಹೇಶ್ (8 ವರ್ಷ) ಇವರು ನಗರದ ಕೊಟ್ಟಾರ ಮಾಲಾಡಿ ಕೋರ್ಟ್ ನ ನಿವಾಸಿಗಳಾದ ಮಹೇಶ್ ಕುಮಾರ್ ಮತ್ತು ಸುಪ್ರೀತಾ ದಂಪತಿಯ ಪುತ್ರನಾಗಿದ್ದು, ನಗರದ ಲೂಡ್ ಸೆಂಟ್ರಲ್ ಸ್ಕೂಲ್ ನ 3ನೇ ತರಗತಿಯ ವಿದ್ಯಾರ್ಥಿ. ಇವರು ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ hoigebail ನ ತರಬೇತಿದಾರರಾದ ಮೋಹನ್ ದಾಸ್. ಕೆ ಮತ್ತು ಜಯರಾಜ್ ರವರಿಂದ ತರಬೇತಿ ಪಡೆದಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English