ಬಜೆಟ್ ನಲ್ಲಿ ಗೃಹ ಖರೀದಿದಾರರಿಗೆ 3.5 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ

10:04 PM, Friday, July 5th, 2019
Share
1 Star2 Stars3 Stars4 Stars5 Stars
(No Ratings Yet)
Loading...

Nirmala-Seetharamanನವದೆಹಲಿ: ನಿರ್ಮಲಾ ಸೀತಾರಾಮನ್ ಮಂಡಿಸಿರುವ ತಮ್ಮ ಚೊಚ್ಚಲ ಕೇಂದ್ರ ಬಜೆಟ್ 2019-20 ನಲ್ಲಿ ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಅತಿ ಹೆಚ್ಚು ಪ್ರಯೋಜನವಾಗುವ ಬದಲಾವಣೆಗಳನ್ನು ಘೋಷಿಸಿದ್ದಾರೆ.

45 ಲಕ್ಷ ರೂಪಾಯಿ ವರೆಗಿನ ಮನೆಯನ್ನು ಸಾಲ ಪಡೆದು ಕೊಳ್ಳುವವರಿಗೆ ಹೆಚ್ಚುವರಿಯಾಗಿ 1.50 ಲಕ್ಷ ರೂಪಾಯಿ ಬಡ್ಡಿ ಕಡಿತವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಹಿಂದಿದ್ದ 2 ಲಕ್ಷ ರೂಪಾಯಿ ಬಡ್ಡಿ ಕಡಿತ ಪ್ರಯೋಜನವೂ ಸೇರಿ ಈಗ ಒಟ್ಟಾರೆ 3.5 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ ಸಿಗಲಿದೆ. ಮಾರ್ಚ್ 31, 2020 ವರೆಗೆ ಗೃಹ ಸಾಲ ಪಡೆಯುವವರಿಗೆ ಈ ಪ್ರಯೋಜನ ದೊರೆಯಲಿದೆ.

ಕೇಂದ್ರ ಸರ್ಕಾರದ ಈ ಘೋಷಣೆಯಿಂದಾಗಿ 15 ವರ್ಷದವರೆಗೆ ಸಾಲದ ಅವಧಿ ಹೊಂದುವ ಮಧ್ಯಮ ವರ್ಗದವರಿಗೆ 7 ಲಕ್ಷ ರೂಪಾಯಿ ವರೆಗೆ ಪ್ರಯೋಜನ ದೊರೆಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಜೆಟ್ ನಲ್ಲಿ ಬಂಗಾರದ ಮೇಲಿನ ಆಮದು ಸುಂಕ ಶೇ. 10ರಿಂದ 12.5ಕ್ಕೆ ಏರಿಕೆ ಮಾಡಿದ್ದು ಚಿನ್ನ ದುಬಾರಿಯಾಗಲಿದೆ.

ಯಾವುದು ಅಗ್ಗ
* ಪಾಮ್ ಆಯಿಲ್
* ಫ್ಯಾಟಿ ಆಯಿಲ್
* ಪೇಪರ್ಸ್
* ಇಥಲಿನ್
* ಕೋಬಾಲ್ಟ್
* ಡಯಾಲಿಸಿಸ್ ಯಂತ್ರ ಮತ್ತು ಪರಿಕರಗಳು
* ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು
* ಚರ್ಮೋತ್ಪನ್ನ

ಯಾವುದು ದುಬಾರಿ
* ಪೆಟ್ರೋಲ್, ಡೀಸೆಲ್
* ಬಂಗಾರ, ಬೆಳ್ಳಿ
* ಟೈಲ್ಸ್, ಮಾರ್ಬಲ್
* ಆಟೋ ಬಿಡಿಭಾಗಗಳು
* ತಂಬಾಕು ಉತ್ಪನ್ನ
* ಪಿವಿಸಿ ಪೈಪ್ಸ್
* ವಿನೈಲ್ ಫ್ಲೋರ್ಸ್
* ರಬ್ಬರ್
* ಸಿಸಿಟಿವಿ ಕ್ಯಾಮೆರಾ ಡಿವಿಡಿ ಐಪಿ ಕ್ಯಾಮೆರಾ

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English