ಸುರತ್ಕಲ್: ಸಾಕು ನಾಯಿಯೊಂದು ನಮ್ಮ ನೆಮ್ಮದಿ ಕೆಡಿಸುತ್ತಿದೆ. ಅದರ ಬೊಗಳುವಿಕೆಯಿಂದ ವಿದ್ಯಾರ್ಥಿಗಳಿಗೆ ಓದಲಾಗುತ್ತಿಲ್ಲ ಎಂದು ಸ್ಥಳೀಯರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ ಕುತೂಹಲಕಾರಿ ಪ್ರಕರಣ ವರದಿಯಾಗಿದೆ!
ಸುರತ್ಕಲ್ ಸಮೀಪದ ಕಾನದ ಶರತ್ ಅವರು ಶ್ವಾನ ಪ್ರೇಮಿಯಾಗಿದ್ದು ಮೂರು ಶ್ವಾನಗಳನ್ನು ಸಾಕಿದ್ದರು.
ಅವುಗಳು ಸ್ವಲ್ಪ ಶಬ್ದವಾದರೂ ಬೊಗಳಿ ಯಜಮಾನನನ್ನು ಎಚ್ಚರಿಸುತ್ತವೆ. ನಿರಂತರ ಅವುಗಳ ಬೊಗಳುವಿಕೆಯಿಂದ ನಮಗೆ ತೊಂದರೆಯಾಗುತ್ತದೆ ಎಂದು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಶರತ್ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಶ್ವಾನವನ್ನು ದೂರ ಬಿಡಿ, ಇಲ್ಲವೆ ಮನೆ ಖಾಲಿ ಮಾಡಿ ಎಂದು ಸೂಚಿಸಿದರು. ಇದಕ್ಕೊಪ್ಪದ ಶರತ್, ಶ್ವಾನಗಳನ್ನು ನಿಯಮದಂತೆ ವೈದ್ಯರಲ್ಲಿ ತೋರಿಸಿ ಕಾಲಕಾಲಕ್ಕೆ ಔಷಧಗಳನ್ನು ನೀಡಿ ಆರೋಗ್ಯವಾಗಿರಿಸಿಕೊಂಡಿದ್ದೇನೆ ಎಂದು ವಾದ ಮಂಡಿಸಿದ್ದಾರೆ. ಒಟ್ಟಾರೆ ಈ ಪ್ರಕರಣ ಪೊಲೀಸರಿಗೆ ತಲೆ ನೋವು ತಂದಿದೆ.
Click this button or press Ctrl+G to toggle between Kannada and English