ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಕಂಡಿ ರಹೀಂ ಬಂಧನ

10:20 PM, Monday, July 8th, 2019
Share
1 Star2 Stars3 Stars4 Stars5 Stars
(No Ratings Yet)
Loading...

Karadi-Rahimಮಂಗಳೂರು : ನಗರದ ಪಾಂಡೇಶ್ವರ ಶ್ರೀನಿವಾಸ್ ಕಾಲೇಜಿನ ಪಕ್ಕದಲ್ಲಿರುವ ಶ್ರೀರಾಂ ಗ್ಯಾರೇಜ್ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತಿದ್ದ ಮಂಗಳೂರು ನಗರದ ಪ್ರಮುಖ ಆರೋಪಿಯಾದ ರಹೀಂ ಯಾನೆ ಗೂಡ್ಸ್ ರಹೀಂ ಯಾನೆ ಕಂಡಿ ರಹೀಂ ಎಂಬಾತನಿಂದ 1 ಕೆ.ಜಿ 100 ಗ್ರಾಂ ತೂಕದ ಗಾಂಜಾ ಮತ್ತು ಕ್ರತ್ಯಕ್ಕೆ ಬಳಸಿದ ಆಕ್ಟಿವಾ ಹೋಂಡಾ , ಮೊಬೈಲ್ ಪೋನ್ ಹಾಗೂ ಡಿಜಿಟಲ್ ತೂಕ ಮಾಪನ ವನ್ನು  ಎಕನಾಮಿಕ್  &ನಾರ್ಕೋಟಿಕ್ಸ್ ಕ್ರೈಂ  ಪೊಲೀಸರು ಸೋಮವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಆರೋಪಿತನ ವಿರುದ್ದ ಈಗಾಗಲೇ ಒಟ್ಟು 11 ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ.

ದಸ್ತಗಿರಿಯಾದ ಆರೋಪಿಯನ್ನು ರಹೀಂ @ ಕಂಡಿ ರಹೀಂ @ ಗೂಡ್ಸ್ ರಹೀಂ (44) ತಂದೆ- ಅಬ್ದುಲ್ ಅಜೀಜ್ ,ವಾಸ-ಅಜಾರ್ ಹೌಸ್ ಅನ್ಸಾರಿ ಕ್ರಾಸ್ ರೋಡ್ ಬಂದರು ಮಂಗಳೂರು. ಹಾಲಿ ವಾಸ:ಪುಣಿಕೋಡಿ ಹೌಸ್ ಅಡ್ಡೂರು ನೂಯಿ ಮಂಗಳೂರು ಎನ್ನಲಾಗಿದೆ.

ಈ ಪ್ರಕರಣದ ಕಾರ್ಯಾಚರಣೆಯು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸಂದೀಪ್ ಪಾಟೀಲ್ ಐ.ಪಿ.ಎಸ್. ಮಂಗಳೂರು ನಗರ. ಹಾಗೂ ಪೊಲೀಸ್ ಉಪ ಆಯುಕ್ತರುಗಳಾದ ಮಾನ್ಯ ಶ್ರೀ ಹನುಮಂತರಾಯ ಐ.ಪಿ.ಎಸ್. ಮತ್ತು ಶ್ರೀ ಲಕ್ಷ್ಮೀ ಗಣೇಶ್ ಇವರ ಮಾರ್ಗದರ್ಶನದಂತೆ ಮಂಗಳೂರು ನಗರದ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಕೃಷ್ಣ ಕೆ.ಕೆ , ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English