ಮಂಗಳೂರು : ರಾಜ್ಯ ಸರಕಾರವು ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿರುವುದರಿಂದ ಜನಸಾಮಾನ್ಯರು ಭಾರೀ ಸಂಕಷ್ಟವನ್ನು ಎದುರಿಸುವಂತಾಗಿದೆ.ಕಳೆದ ಹಲವು ವರ್ಷಗಳ ಹಿಂದೆ ರಾಜ್ಯ ಸರಕಾರವು ವಿದ್ಯುತ್ ದರವನ್ನು ಏರಿಸುವಾಗ ಜನತೆಗೆ ಬಹಿರಂಗವಾಗಿ ತಿಳಿಸುತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷಕ್ಕೆ 2 ಬಾರಿ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿದ್ದಾರೆ.ಮಾತ್ರವಲ್ಲದೆ ಹೆಚ್ಚುವರಿ ಡಿಪಾಸಿಟ್ ಸಂಗ್ರಹ ಹಾಗೂ ತಪ್ಪು ಲೆಕ್ಕಾಚಾರಗಳ ಮೂಲಕ ಜನರನ್ನು ಹಗಲು ದರೋಡೆ ನಡೆಸುತ್ತಿರುವ ಮೆಸ್ಕಾಂ ಹಾಗೂ ರಾಜ್ಯ ಸರಕಾರದ ವಿರುದ್ದ ಪ್ರಬಲ ಹೋರಾಟ ನಡೆಸಬೇಕೆಂದು* CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಕರೆ ನೀಡಿದರು.
ಅವರು ಉರ್ವಾಸ್ಟೋರಿನಲ್ಲಿ ಜರುಗಿದ 25ನೇ ದೇರೆಬೈಲ್ ಪಶ್ಚಿಮ ವಾರ್ಡ್ ಮಟ್ಟದ CPIM ಕಾರ್ಯಕರ್ತರ ಹಾಗೂ ಹಿತೈಷಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮುಂದುವರಿಸುತ್ತಾ ಅವರು, *ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವ್ರದ್ದಿ ಹೆಸರಿನಲ್ಲಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟಿಗಟ್ಟಲೆ ಹಣವನ್ನು ಗುಳುಂ ನಡೆಸಿದ್ದಾರೆಯೇ ಹೊರತು ಎಲ್ಲಿಯೂ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.ನಗರದ ಹ್ರದಯ ಭಾಗದಲ್ಲೇ ಒಳಚರಂಡಿ ವ್ಯವಸ್ಥೆಯು ಅವ್ಯವಸ್ಥೆಗಳ ಆಗರವಾಗಿದೆ.ಮಳೆಗಾಲ ಪ್ರಾರಂಭಗೊಂಡರೂ ನಗರದ ಹಲವೆಡೆ ಇನ್ನೂ ಕುಡಿಯಲು ನೀರಿಲ್ಲ.ಮಳೆನೀರು ಹರಿದಾಡಲು ರಸ್ತೆಯ ಪಕ್ಕದಲ್ಲಿ ಚರಂಡಿಗಳ ವ್ಯವಸ್ಥೆಗಳಿಲ್ಲದೆ ನೀರು ರಸ್ತೆಗಳಲ್ಲೇ ಹರಿದಾಡುತ್ತಿದೆ.ಒಟ್ಟಿನಲ್ಲಿ ಇಡೀ ನಗರದ ಅಭಿವೃದ್ಧಿಗೆ ತೊಡಕಾಗಿರುವುದು ನಗರಪಾಲಿಕೆ ಕಚೇರಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವೇ ಮೂಲಕಾರಣವಾಗಿದೆ* ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡುತ್ತಾ, *ಮೋದಿ ಮತ್ತೊಮ್ಮೆ ಎಂಬ ಭ್ರಮೆಯನ್ನು ಸ್ರಷ್ಟಿಸಿ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನು ನಡೆಸಿ ಮತ್ತೊಮ್ಮೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತ್ರತ್ವದ ಸರಕಾರವು ಮುಂದಿನ ದಿನಗಳಲ್ಲಿ ಜನರ ಪರವಾಗಿ ಕಾರ್ಯ ನಿರ್ವಹಿಸದೆ ಕೇವಲ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುತ್ತಾರೆಂಬುದಕ್ಕೆ ಇತ್ತೀಚಿಗೆ ಮಂಡಿಸಿದ ಬಜೆಟ್ ಜ್ವಲಂತ ಉದಾಹರಣೆಯಾಗಿದೆ* ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು CPIMನ ಯುವನಾಯಕರಾದ ಮನೋಜ್ ಉರ್ವಾಸ್ಟೋರ್ ರವರು ವಹಿಸಿದ್ದರು. ವೇದಿಕೆಯಲ್ಲಿ CPIM ಮುಖಂಡರಾದ ಪ್ರದೀಪ್,ಕಿಶೋರ್,ಪ್ರಶಾಂತ್ ಎಂ.ಬಿ,ಗಂಗಾಧರ್,ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
July 10th, 2019 at 17:45:09
Ivarige keluvavru yaru illa.