ಕದ್ದು ತಂದು 18 ಆಟೋರಿಕ್ಷಾಗಳನ್ನು ಗುಜಿರಿ ಅಂಗಡಿಯಲ್ಲಿಟ್ಟಿದ್ದ ವ್ಯಾಪಾರಿ

9:18 PM, Wednesday, July 10th, 2019
Share
1 Star2 Stars3 Stars4 Stars5 Stars
(No Ratings Yet)
Loading...

stolen-auto ಮಂಗಳೂರು: ಸೂರಲ್ಪಾಡಿಯಲ್ಲಿ 18 ಆಟೋರಿಕ್ಷಾಗಳನ್ನು ದಾಖಲೆ ರಹಿತವಾಗಿ ‌ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಉಳಾಯಿಬೆಟ್ಟು ನಿವಾಸಿ ಇರ್ಫಾನ್ (28) ಬಂಧಿತ ಆರೋಪಿ.

ಬಜ್ಪೆ ಪೊಲೀಸ್ ಠಾಣಾ ಸರಿಹದ್ದಿನ ಬಡಗುಳಿಪ್ಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿ, ಕಾಂಪ್ಲೆಕ್ಸ್ವೊಂದರ ಸಮೀಪದ ಗುಜರಿ ಅಂಗಡಿ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಯಾವುದೇ ದಾಖಲಾತಿ ಇಲ್ಲದ ಆಟೋರಿಕ್ಷಾಗಳನ್ನು ಇರ್ಫಾನ್ ಕಳವು ಮಾಡಿ ತಂದಿರಿಸಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ನಿರೀಕ್ಷಕ ಎಸ್. ಪರಶಿವಮೂರ್ತಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋರಿಕ್ಷಾಗಳು ವಶಕ್ಕೆ ಪೊಲೀಸರು ಗುಜರಿ ಅಂಗಡಿಗೆ ತೆರಳಿ ಪರಿಶೀಲಿಸಿದಾಗ ಹಲವು ಆಟೋರಿಕ್ಷಾಗಳನ್ನು ಇರಿಸಿರುವುದು ಕಂಡುಬಂದಿದೆ. ಅಂಗಡಿಯಲ್ಲಿದ್ದ ಇರ್ಫಾನ್‌ನನ್ನು ವಿಚಾರಿಸಿದಾಗ ಸಮಂಜಸ ಉತ್ತರ ನೀಡಿರಲಿಲ್ಲ. ದಾಖಲಾತಿಯ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಿಲ್ಲ. ಬಳಿಕ ಆಟೋರಿಕ್ಷಾಗಳನ್ನು ಇನ್ನೋರ್ವ ಆರೋಪಿ ಜೊತೆ ಸೇರಿ ಮಾರಾಟ ಮಾಡುವ ಉದ್ದೇಶದಿಂದ ಇರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಿ ಅಂಗಡಿಯಲ್ಲಿದ್ದ ಒಟ್ಟು 18 ಆಟೋರಿಕ್ಷಾಗಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಆಟೋರಿಕ್ಷಾಗಳ ಒಟ್ಟು ಮೌಲ್ಯ 3.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English