ಕಚಡಾ ನನ್ ಮಕ್ಳು..” ಎಂದು ಪತ್ರಕರ್ತರನ್ನು ನಿಂದಿಸಿದ ಎಚ್.ಡಿ.ರೇವಣ್ಣ

8:32 PM, Monday, July 15th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

HD-Revanna ಮಂಗಳೂರು  : ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಉಳಿಸಿಕೊಳ್ಳಲು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು  ದೇವಸ್ಥಾನ ಸುತ್ತುವುದನ್ನು ಕವರೇಜ್ ಮಾಡಲು ಹೋದ  ಪತ್ರಕರ್ತರನ್ನು ಮತ್ತು ಛಾಯಾಗ್ರಾಹಕರನ್ನು ಕಚಡಾ ನನ್ ಮಕ್ಳು..”  ಎಂದು ನಿಂದಿಸಿ ಪತ್ರಕರ್ತರಲ್ಲಿದ್ದ ಆ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಭದ್ರತಾ ಸಿಬ್ಬಂದಿಗಳ ಮೂಲಕ ಡಿಲೀಟ್ ಮಾಡಿಸಿದ  ಘಟನೆ  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಭಾನುವಾರ ನಡೆದಿದೆ

ಭಾನುವಾರ ಕೊಲ್ಲೂರು, ಆನೆಗುಡ್ಡೆ, ಹಟ್ಟಿಯಂಗಡಿ ಸೇರಿದಂತೆ ಕಟೀಲು ದೇವಳಗಳಿಗೆ ಭೇಟಿ ನೀಡಿದ್ದಾರೆ.  ಸಂಜೆ 03.20 ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದು ಈ ಸಂದರ್ಭ ಅವರನ್ನು ಅಲ್ಲಿನ ಅರ್ಚಕರು ಹಾಗೂ ಆಡಳಿತ ಮಂಡಳಿ ದೇಗುಲದ ಪ್ರವೇಶ ದ್ವಾರದ ಬಳಿ ಸ್ವಾಗತಿಸಿ ಒಳಗಡೆ ಕರೆದೊಯ್ಯುತ್ತಿದ್ದ ಸಮಯದಲ್ಲಿ ಸ್ಥಳೀಯ ವಾಹಿನಿಗಳ ಪತ್ರಕರ್ತರು ಫೋಟೋ ಹಾಗೂ ವಿಡಿಯೋ ತೆಗೆದುದನ್ನು ಆಕ್ಷೇಪಿಸಿ ತಮ್ಮ ಭದ್ರತಾ ಸಿಬ್ಬಂದಿಗಳ ಮೂಲಕ ಹೇಳಿಸಿ ಪ್ರಸಾದ ಸ್ವೀಕರಿಸುವ ವೇಳೆ ಅಲ್ಲಿದ್ದ ಪತ್ರಕರ್ತರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.

ಪ್ರಸಾದ ಸ್ವೀಕಾರ ಮಾಡುತ್ತಲೇ ಪತ್ರಕರ್ತರ ಬಳಿ ಬಂದ ರೇವಣ್ಣ ಅವರು “ನಾಚಿಕೆ ಆಗಲ್ವಾ ಹೇಳಿದ್ದು, ಅರ್ಥ ಅಗಲ್ವಾ ಕಚಡಾ ನನ್ ಮಕ್ಳು..” ಎಂದು ನಿಂದಿಸಿ ಪತ್ರಕರ್ತರಲ್ಲಿದ್ದ ಆ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಭದ್ರತಾ ಸಿಬ್ಬಂದಿಗಳ ಮೂಲಕ ಡಿಲೀಟ್ ಮಾಡಿಸಿದ್ದಾರೆ. ರೇವಣ್ಣ ಅವರ ಈ ನಡೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪತ್ರಕರ್ತರ ಸಂಘದ ಖಂಡನೆ

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ  ಭಾನುವಾರ ಆಗಮಿಸಿದ  ಸಚಿವ ಎಚ್ ಡಿ ರೇವಣ್ಣ ಅವರು ಮೂಲ್ಕಿವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂದೂರು ಅವರಿಗೆ ಅವಹೇಳನ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ. ಸಚಿವರ ಈ ದುಂಡಾವರ್ತನೆ  ಪತ್ರಕರ್ತರ ಸಮುದಾಯಕ್ಕೆ ಮಾಡಿದ ಅವಮಾನ ವಾಗಿದೆ. ಘಟನೆ ಕುರಿತು ಸಚಿವರು ಕ್ಷಮೆ ಯಾಚಿಸಬೇಕು. ರಾಜ್ಯ ಸರಕಾರ ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಒತ್ತಾಯಿಸುತ್ತದೆ  ಎಂದು ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 ಪ್ರತಿಕ್ರಿಯೆ - ಶೀರ್ಷಿಕೆ - ಕಚಡಾ ನನ್ ಮಕ್ಳು..” ಎಂದು ಪತ್ರಕರ್ತರನ್ನು ನಿಂದಿಸಿದ ಎಚ್.ಡಿ.ರೇವಣ್ಣ

  1. Rudresh D, Thuppadahalli%20chitradurga

    Enta kachadagala baainda kchda anskondu report kodtaralla great

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English